ಹೊಸವರ್ಷದ ಕ್ಯಾಲೆಂಡರ್’ನಲ್ಲಿ ಕುತುಬ್ ಮಿನಾರ್ ಹೆಸರು ವಿಷ್ಣುಸ್ತಂಭ!

First Published 19, Mar 2018, 2:11 PM IST
Hindu Mahasabha refers to Qutub Minar as Vishnu Stambh in new calendar
Highlights
  • ಹೊಸವರ್ಷಕ್ಕೆ ಹಿಂದೂ ಮಹಾಸಭಾದ ಆಗ್ರಾ ಘಟಕ ಬಿಡುಗಡೆ ಮಾಡಿರುವ ಕ್ಯಾಲೆಂಡರ್
  • ತಾಜ್ ಮಹಲ್ ಸೇರಿದಂತೆ 7 ಮಸೀದಿಗಳಿಗೆ ಹಿಂದೂ ದೇವಾಲಯಗಳ ಹೆಸರು

ಆಗ್ರಾ: ಹೊಸವರ್ಷದ ಸಂದರ್ಭದಲ್ಲಿ ಹಿಂದೂ ಮಹಾಸಭಾದ ಆಗ್ರಾ ಘಟಕವು ವಿವಾದಾತ್ಮಕ ಹಿಂದೂ ಕ್ಯಾಲೆಂಡರ್’ನ್ನು ಬಿಡುಗಡೆ ಮಾಡಿದೆ.

ಈ ಕ್ಯಾಲೆಂಡರ್’ನಲ್ಲಿ ಮೊಗಲ್ ಯುಗದ ವಿಶ್ವವಿಖ್ಯಾತ ಸ್ಮಾರಕ ತಾಜ್ ಮಹಲ್ ಸೇರಿದಂತೆ 7 ಮಸೀದಿಗಳನ್ನು ಹಿಂದೂ ದೇವಾಲಯಗಳೆಂದು ಅದು ಹೆಸರಿಸಿದೆ.

ಬಿಡುಗಡೆ ಮಾಡಿರುವ ಕ್ಯಾಲೆಂಡರ್’ನಲ್ಲಿ ತಾಜ್ ಮಹಲನ್ನು ‘ತೇಜೋ ಮಹಾಲಯ ದೇವಸ್ಥಾನ’ವೆಂದು, ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿಯನ್ನು ‘ಭೋಜಶಾಲೆ’, ಕಾಶಿಯ ಗ್ಯಾನವ್ಯಾಪಿ ಮಸೀದಿಯನ್ನು ‘ವಿಶ್ವನಾಥ ದೇವಸ್ಥಾನ’, ಕುತುಬ್ ಮಿನಾರನ್ನು ‘ವಿಷ್ಣುಸ್ತಂಭ’, ಜಾನ್’ಪುರದ ಅಟಾಲಾ ಮಸೀದಿಯನ್ನು ‘ಅಟ್ಲಾ ದೇವಿ ದೇವಸ್ಥಾನ’ ಹಾಗೂ ಬಾಬ್ರಿ ಮಸೀದಿಯನ್ನು ರಾಮಜನ್ಮಭೂಮಿಯೆಂದು ಹೆಸರಿಸಲಾಗಿದೆ.

ನಾವು ಹೊಸವರ್ಷದ ಸಂದರ್ಭದಲ್ಲಿ ಹೋಮ-ಹವನಗಳನ್ನು ನಡೆಸಿದ್ದೇವೆ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ತೀರ್ಮಾನ ಕೈಗೊಂಡಿದ್ದೇವೆಯೆಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಹೇಳಿದ್ದಾರೆಂದು ವರದಿಯಾಗಿದೆ.

ಭಾರತವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸುವ ತಮ್ಮ ಬೇಡಿಕೆಯನ್ನು ಸರ್ಕಾರವು  ಒಪ್ಪಿಕೊಳ್ಳುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.  

loader