ಮುಸ್ಲಿಂ ಯುವಕ ಅಮೀರ್ ಸುಹೇಲ್'ನನ್ನು  ಹಿಂದೂ ಯುವತಿ ಪ್ರೀತಿ ಮಾಡುತ್ತಿದ್ದಳು. ಇದರಿಂದ  ಆತನೊಂದಿಗೆ ತೆರಳದಂತೆ ಹಿಂದೂ ಸಂಘಟನೆಗಳು ಆಕೆಯ ಮನಪರಿರ್ತನೆ ಮಾಡಲು ಯತ್ನಿಸಿದ್ದರೂ ಕೂಡ ಯಾವುದೇ ರೀತಿ ಪ್ರಯೋಜನವಾಗಿರಲಿಲ್ಲ.

ಮಂಗಳೂರು(ನ.30): ಮಂಗಳೂರಿನಲ್ಲಿ ಯುವತಿಯೋರ್ವಳು ಗಾಂಜಾ ವ್ಯಾಪಾರಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕ ಅಮೀರ್ ಸುಹೇಲ್'ನನ್ನು ಹಿಂದೂ ಯುವತಿ ಪ್ರೀತಿ ಮಾಡುತ್ತಿದ್ದಳು. ಇದರಿಂದ ಆತನೊಂದಿಗೆ ತೆರಳದಂತೆ ಹಿಂದೂ ಸಂಘಟನೆಗಳು ಆಕೆಯ ಮನಪರಿರ್ತನೆ ಮಾಡಲು ಯತ್ನಿಸಿದ್ದರೂ ಕೂಡ ಯಾವುದೇ ರೀತಿ ಪ್ರಯೋಜನವಾಗಿರಲಿಲ್ಲ.

ಬಳಿಕ ಆಕೆ ತನಗೆ ಆತನೇ ಮುಖ್ಯ ಎನ್ನುವ ರೀತಿಯಲ್ಲಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಳು. ಈ ಬಗ್ಗೆ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಳು. ಈತ ಅನೇಕ ವಿದ್ಯಾರ್ಥಿಗಳಿಗೆ ಗಾಂಜಾವನ್ನು ಪೂರೈಕೆ ಮಾಡುತ್ತಿದ್ದ ಎನ್ನುವ ವಿಚಾರವೂ ಕೂಡ ಹೊರ ಬಂದಿದ್ದು, ಬಳಿಕ ಆತನನ್ನು ಬಂಧಿಸಲಾಗಿತ್ತು. ಇದರಿಂದ ದುರ್ಗಾವಾಹಿನಿ ಎನ್ನುವ ಹಿಂದೂ ಸಂಘಟನೆಯೊಂದು ಆಕೆಯ ಮನವೊಲಿಸುವಲ್ಲಿ ಸಫಲವಾಗಿದೆ. ಸದ್ಯ ಆಕೆಯು ತಾನು ಆತನನ್ನು ಪ್ರೀತಿ ಮಾಡಿರುವುದು ತಪ್ಪೆಂದು ಒಪ್ಪಿಕೊಂಡಿದ್ದಾರೆ.