ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ವಿವಾದಾತ್ಮಕವಾಗಿ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ. 'ಹಿಂದೂವೊಬ್ಬ ಭಯೋತ್ಪಾದಕನಾಗಲು ಸಾಧ್ಯವೇ ಇಲ್ಲ. ರಾಜಕೀಯ ಮೈಲೇಜ್ ತೆಗೆದುಕೊಳ್ಳಲು ಕಾಂಗ್ರೆಸ್  ಹಿಂದೂ ಭಯೋತ್ಪಾದಕ ' ಎನ್ನುವ ಪದವನ್ನು ಬಳಸಿದೆ ಎಂದು ಅನಿಲ್ ವಿಜ್ ಹೇಳಿದ್ದಾರೆ.  

ನವದೆಹಲಿ (ಜೂ.21): ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ವಿವಾದಾತ್ಮಕವಾಗಿ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ. 'ಹಿಂದೂವೊಬ್ಬ ಭಯೋತ್ಪಾದಕನಾಗಲು ಸಾಧ್ಯವೇ ಇಲ್ಲ. ರಾಜಕೀಯ ಮೈಲೇಜ್ ತೆಗೆದುಕೊಳ್ಳಲು ಕಾಂಗ್ರೆಸ್ ಹಿಂದೂ ಭಯೋತ್ಪಾದಕ' ಪದವನ್ನು ಬಳಸಿದೆ ಎಂದು ಅನಿಲ್ ವಿಜ್ ಹೇಳಿದ್ದಾರೆ.

ಈ ಹಿಂದೆ ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸುತ್ತಾ, ದಾಳಿ ನಡೆಸಿದ ಭಯೋತ್ಪಾದಕರೆಲ್ಲಾ ಪಾಕಿಸ್ತಾನಕ್ಕೆ ಸೇರಿದವರು. ಅವರನ್ನೆಲ್ಲಾ ಬಿಡಲಾಗಿದೆ. ಭಾರತೀಯರನ್ನು ಬಂಧಿಸಿ ಹಿಂದೂ ಭಯೋತ್ಪಾದಕರು ಎನ್ನುವ ಹಣೆಪಟ್ಟಿ ಹಚ್ಚಲಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಹಿಂದೂ ಭಯೋತ್ಪಾದನೆ ಎನ್ನುವ ಪದವನ್ನು ಬಳಸಬಾರದು. ಏಕೆಂದರೆ ಜಾಗತಿಕ ಭಯೋತ್ಪಾದನೆಗೆ ಅಂತ್ಯ ಹಾಡಲು ಹಿಂದೂಗಳಿಂದ ಮಾತ್ರ ಸಾಧ್ಯ. ಇತ್ತೀಚಿಗೆ ಭಯೋತ್ಪಾದಕ ದಾಳಿ ಹೆಚ್ಚುತ್ತಿದ್ದು, ರಾಜಕೀಯ ಲಾಭಕ್ಕೋಸ್ಕರ ಕಾಂಗ್ರೆಸ್ ಹಿಂದೂಗಳ ವಿರುದ್ಧ ಭಯೋತ್ಪಾದನೆ ಕೇಸ್ ಹಾಕಲು ಇಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಅನಿಲ್ ವಿಜ್ ಹೇಳಿಕೆಗೆ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸುತ್ತಾ, ಅನಿಲ್ ಹೇಳುತ್ತಿರುವುದು ಸರಿ. ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವಿಲ್ಲ. ಸಂಗಿಗಳು (ಸಂಘ-ಪರಿವಾರದವರು) ಮಾತ್ರ ಭಯೋತ್ಪಾದಕರು ಎಂದು ಹೇಳಿದ್ದಾರೆ.