Asianet Suvarna News Asianet Suvarna News

ಹಿಮಾಚಲ ಪ್ರದೇಶದ 2 ನೇ ರಾಜಧಾನಿಯಾಗಿ ಧರ್ಮಶಾಲಾ ಘೋಷಣೆ

ಮುಖ್ಯಮಂತ್ರಿ ವೀರಭದ್ರ ಸಿಂಗ್ ಧರ್ಮಶಾಲಾವನ್ನು ಹಿಮಾಚಲ ಪ್ರದೇಶದ 2 ನೇ ರಾಜಧಾನಿಯಾಗಿ ಘೋಷಿಸಿದ್ದಾರೆ.   

Himachala Pradesh gets Its Second Capital In Dharmasala

ಧರ್ಮಶಾಲಾ (ಜ.19): ಮುಖ್ಯಮಂತ್ರಿ ವೀರಭದ್ರ ಸಿಂಗ್ ಧರ್ಮಶಾಲಾವನ್ನು ಹಿಮಾಚಲ ಪ್ರದೇಶದ 2 ನೇ ರಾಜಧಾನಿಯಾಗಿ ಘೋಷಿಸಿದ್ದಾರೆ.   

ವೀರಭದ್ರಸಿಂಗ್ ಇತ್ತೀಚಿಗೆ ಧರ್ಮಶಾಲಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು 2 ನೇ ರಾಜಧಾನಿಯಾಗಿ ಮಾಡುವುದಾಗಿ ಘೋಷಿಸಿದ್ದರು. ರಾಜ್ಯ ಸರ್ಕಾರ ಕೂಡಾ ವರ್ಷದಲ್ಲಿ 2 ತಿಂಗಳು ಧರ್ಮಶಾಲಾವನ್ನು ಚಳಿಗಾಲದ ರಾಜಧಾನಿಯಾಗಿ ಮಾಡಲು ಚಿಂತನೆ ನಡೆಸಿತ್ತು.

ಧರ್ಮಶಾಲಾಗೆ ತನ್ನದೇ ಆದ ಪ್ರಾಮುಖ್ಯತೆಯಿದೆ ಮತ್ತು ಇತಿಹಾಸವಿದೆ. ರಾಜ್ಯದ 2 ನೇ ರಾಜಧಾನಿಯಾಗುವ ಎಲ್ಲಾ ಅರ್ಹತೆಯಿದೆಯೆಂದು ಮುಖ್ಯಮಂತ್ರಿ ವೀರ್ ಭದ್ರ ಸಿಂಗ್ ಹೇಳಿದ್ದಾರೆ.

ರಾಜ್ಯದ ಕಂಗ್ರ, ಚಂಬಾ. ಹಮೀರ್ ಪುರ್ ಮತ್ತು ಉನಾ ಜಿಲ್ಲೆಗಳ ಜನರು ತಮ್ಮ ಕಚೇರಿ ಕೆಲಸಕ್ಕಾಗಿ ದೂರದವರೆಗೆ ಬರಬೇಕಾಗಿತ್ತು. ಧರ್ಮಶಾಲಾವನ್ನು 2 ನೇ ರಾಜಧಾನಿಯಾಗಿ ಮಾಡಿರುವುದರಿಂದ ಆ ಭಾಗದ ಜನರಿಗೆಲ್ಲಾ ಅನುಕೂಲವಾಗಿದೆ ಎಂದು ವೀರಭದ್ರಸಿಂಗ್ ಹೇಳಿದ್ದಾರೆ.

Follow Us:
Download App:
  • android
  • ios