Asianet Suvarna News Asianet Suvarna News

ಬಲವಂತದ ಧರ್ಮಾಂತರಕ್ಕೆ 7 ವರ್ಷ ಜೈಲು ಶಿಕ್ಷೆ!

ಬಲವಂತದ ಧರ್ಮಾಂತರಕ್ಕೆ 7 ವರ್ಷ ಜೈಲು ಶಿಕ್ಷೆ| ಹಿಮಾಚಲ ಪ್ರದೇಶ ಧಾರ್ಮಿಕ ಹಕ್ಕು-2019 ವಿದೇಯಕಕ್ಕೆ ಪ್ರತಿಪಕ್ಷದ ಬೆಂಬಲ

Himachal Pradesh Introduces Bill Against Forced Religious Conversion
Author
Bangalore, First Published Aug 31, 2019, 9:34 AM IST

ಶಿಮ್ಲಾ[ಆ.31]: ವೈವಾಹಿಕ, ಮತ ಪರಿವರ್ತನೆಗೆ ಉತ್ತೇಜನ ಅಥವಾ ಇನ್ನಿತರ ಮಾರ್ಗದ ಮೂಲಕ ವ್ಯಕ್ತಿಯೋರ್ವನನ್ನು ಬಲವಂತವಾಗಿ ಧರ್ಮಾಂತರಗೊಳಿಸುವುದನ್ನು ಅಪರಾಧ ಎಂದು ಸಾರುವ ಮಸೂದೆಯನ್ನು ಹಿಮಾಚಲ ಪ್ರದೇಶ ವಿಧಾನಸಭೆ ಅವಿರೋಧವಾಗಿ ಅಂಗೀಕರಿಸಿದೆ.

ವಿಧಾನಸಭೆಯಲ್ಲಿ ಶುಕ್ರವಾರ ಮಂಡನೆಯಾದ ಹಿಮಾಚಲ ಪ್ರದೇಶ ಧಾರ್ಮಿಕ ಹಕ್ಕು-2019 ವಿದೇಯಕಕ್ಕೆ ಪ್ರತಿಪಕ್ಷದ ಬೆಂಬಲವೂ ವ್ಯಕ್ತವಾಯಿತು. ಹೀಗಾಗಿ ಇನ್ನು ಇಂಥ ಕೃತ್ಯಗಳಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಜೈರಾಂ ಠಾಕೂರ್‌, ‘ಬಲವಂತದ ಧರ್ಮ ಪರಿವರ್ತನೆಗಳ ವಿರುದ್ಧ ಕಠಿಣ ಕಾನೂನಿನ ಅಗತ್ಯವಿತ್ತು’ ಎಂದು ಹೇಳಿದರು.

Follow Us:
Download App:
  • android
  • ios