ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯಲ್ಲಿ 500 ಮೀಟರ್‌ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ಸುಪ್ರೀಂ ನಿಷೇಧಿಸಿತ್ತು. ಆದರೆ ತನ್ನ ಈ ಹಿಂದಿನ ಆದೇಶವನ್ನು ಸುಪ್ರೀಂ ಶುಕ್ರವಾರ ತಿದ್ದುಪಡಿ ಮಾಡಿದೆ. 500 ಮೀಟರ್‌ ವ್ಯಾಪ್ತಿಯ ನಿಷೇಧ ಪ್ರದೇಶವನ್ನು 220 ಮೀಟರ್‌ಗೆ ಇಳಿಸಿದೆ.
ನವದೆಹಲಿ(ಎ.01): ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ಸುಪ್ರೀಂ ನಿಷೇಧಿಸಿತ್ತು. ಆದರೆ ತನ್ನ ಈ ಹಿಂದಿನ ಆದೇಶವನ್ನು ಸುಪ್ರೀಂ ಶುಕ್ರವಾರ ತಿದ್ದುಪಡಿ ಮಾಡಿದೆ. 500 ಮೀಟರ್ ವ್ಯಾಪ್ತಿಯ ನಿಷೇಧ ಪ್ರದೇಶವನ್ನು 220 ಮೀಟರ್ಗೆ ಇಳಿಸಿದೆ.
ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿ ಜೆ ಎಸ್ ಖೇಹರ್ ನೇತೃತ್ವದ ಪೀಠವು ತಿದ್ದುಪಡಿ ಬಗ್ಗೆ ಸ್ಪಷ್ಟಪಡಿಸಿದೆ. ಕುಡಿದು ವಾಹನ ಚಾಲನೆ ಮಾಡುವ ಕಾರಣಕ್ಕೆ ಸಂಭವಿಸುವ ಅಪಘಾತಗಳು ಹೆಚ್ಚುತ್ತಿರುವುದನ್ನು ಗಮನಿಸಿ ಈ ತೀರ್ಪು ನೀಡಲಾಗಿದೆ ಎಂದು ಜಸ್ಟಿಸ್ ಡಿ ವೈ ಚಂದ್ರಚೂಡ್ ಮತ್ತು ಜಸ್ಟಿಸ್ ಎಲ್ ಎನ್ ರಾವ್ ಅವರನ್ನೂ ಒಳಗೊಂಡ ಪೀಠವು ಹೇಳಿದೆ.
ಡಿಸೆಂಬರ್ 15ಕ್ಕೆ ಮುನ್ನ ಮದ್ಯಮಾರಾಟ ಅಂಗಡಿಗಳಿಗೆ ನೀಡಲಾಗಿದ್ದ ಲೈಸೆನ್ಸ್ ಈ ವರ್ಷ ಸೆಪ್ಟಂಬರ್ 30ರ ತನಕ ಜಾರಿಯಲ್ಲಿರುತ್ತದೆ ಎಂದು ಆದೇಶವು ಹೇಳಿದೆ. ಇತರ ಮದ್ಯದಂಗಡಿಗಳು ಡಿ.15ರ ತೀರ್ಪಿನ ಪ್ರಕಾರ ಇಂದಿನಿಂದ ಮುಚ್ಚಲ್ಪಡುತ್ತವೆ. ಇನ್ನೂ ಹೊಸ ನಿಯಮವೂ ಸಿಕ್ಕಿಂ, ಮೇಘಾಲಯ ಮತ್ತು ಹಿಮಾಚಲ ಪ್ರದೇಶಕ್ಕೂ ಅನ್ವಯವಾಗಲಿದೆ ಎಂದು ಸುಪ್ರೀಂ ತೀರ್ಪು ನೀಡಿದೆ.
