ದಿನವೊಂದಕ್ಕೆ ಹಣ ತೆಗೆಯುವ ಮಿತಿಯನ್ನು ರೂ.2 ಸಾವಿರದಿಂದ ರೂ.2.500, ವಾರಕ್ಕೆ ರೂ.20 ಸಾವಿರದಿಂದ ರೂ.24 ಸಾವಿರಕ್ಕೆ ಏರಿಸಲಾಗಿದೆ.
ನವದೆಹಲಿ(ನ.14): ಏಟಿಎಂ ಯಂತ್ರದಿಂದ ಹಣ ತೆಗೆಯುವ ಹಾಗೂ ವಿನಿಮಯ ಮಾಡಿಕೊಳ್ಳುವ ಮಿತಿಯನ್ನು ಕೇಂದ್ರ ಸರ್ಕಾರ ಏರಿಸಿದೆ. ಆದರೆ ಅದು ಕೇವಲ ಮರು-ಹೊಂದಾಣಿಕೆ ಮಾಡಿರುವ ಏಟಿಎಂ ಯಂತ್ರಗಳಲ್ಲಿ ಮಾತ್ರ ಎಂದು ಹಣಕಾಸು ವ್ಯವಹಾರ ಇಲಾಖೆ ಕಾರ್ಯದರ್ಶಿ ಸ್ಪಷ್ಟೀಕರಣ ನೀಡಿದ್ದಾರೆ.
ದಿನವೊಂದಕ್ಕೆ ಹಣ ತೆಗೆಯುವ ಮಿತಿಯನ್ನು ರೂ.2 ಸಾವಿರದಿಂದ ರೂ.2.500, ವಾರಕ್ಕೆ ರೂ.20 ಸಾವಿರದಿಂದ ರೂ.24 ಸಾವಿರಕ್ಕೆ ಏರಿಸಲಾಗಿದೆ. ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳುವ ಮಿತಿಯನ್ನು ದಿನವೊಂದಕ್ಕೆ 4 ಸಾವಿರದಿಂದ 4,500ಕ್ಕೆ ಹೆಚ್ಚಿಸಲಾಗಿದೆ.
ತಮ್ಮ ಖಾತೆಯಿಂದ ಕೇವಲ ರೂ.10 ಸಾವಿರ ವಿತ್’ಡ್ರಾ ಮಾಡಲು ಇದ್ದ ನಿರ್ಬಂಧವನ್ನು ಕೂಡಾ ಸಡಿಲಿಸಲಾಗಿದೆ. ಆದಷ್ಟು ಹೆಚ್ಚು ಮೈಕ್ರೋ ಏಟಿಎಂಗಳನ್ನು ಸ್ತಾಪಿಸುವುದಾಗಿಯೂ ಹಣಕಾಸು ಇಲಾಖೆ ತಿಳಿಸಿದೆ.
