ಕೇಂದ್ರದ ವಿರುದ್ಧ ಅಹೋರಾತ್ರಿ ಧರಣಿ ಕುಳಿತ ಮಮತಾ, ಸುಪ್ರೀಂಗೆ ತೆರಳಿದ ಸಿಬಿಐ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Feb 2019, 11:32 PM IST
High Drama West Bengal chief minister Mamata Banerjee launched a dharna
Highlights

ಕೋಲ್ಕತಾದ ಸಿಬಿಐ ಮತ್ತು ಪೊಲೀಸರ ನಡುವಿನ ಹೈಡ್ರಾಮಾ ರಾಜಕಾರಣದ ತಿರುವನ್ನು ನಿಧಾನವಾಗಿ ಪಡೆದುಕೊಳ್ಳುತ್ತಿದೆ. ಸಿಎಂ ಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವದ ಉಳಿವಿಗೆ ಹೋರಾಟ ಮಾಡುತ್ತೇನೆ ಎಂದು ಅಹೋರಾತ್ರಿ ಧರಣಿ ಕುಳಿತಿದ್ದಾರೆ.

ಕೋಲ್ಕತಾ[ಫೆ.03]  ಶಾರದಾ ಚಿಟ್​ ಫಂಡ್​ ಹಗರಣದ ಮೂಲಕ್ಕೆ ಆರಂಭವಾದ ಗೊಂದಲ ಕೇಂದ್ರ ಸರಕಾರ ವರ್ಸಸ್ ಪಶ್ಚಿಮ ಬಂಗಾಳ ಸರಕಾರವಾಗಿ ಬದಲಾಗಿದೆ.

ಕೋಲ್ಕತ್ತಾ ಪೊಲೀಸ್​ ಮುಖ್ಯಸ್ಥ ರಾಜೀವ್​ ಕುಮಾರ್​ರನ್ನು ಪ್ರಶ್ನಿಸಲು ಅವರ ನಿವಾಸಕ್ಕೆ ಬಂದ ಸಿಬಿಐ ಅಧಿಕಾರಿಗಳನ್ನೇ ಪೊಲೀಸರು ತಡೆದಿದ್ದಲ್ಲದೇ, ತಮ್ಮ ಜೀಪ್​ಗಳಲ್ಲಿ ಅವರನ್ನ ಠಾಣೆಗೆ ಕರೆದೊಯ್ದಿದ್ದರು ಎನ್ನಲಾಗಿದ್ದು ಕಿಡಿ ಹೊತ್ತಲು ಕಾರಣವಾಗಿದೆ.

ಸಿಬಿಐ ಅಧಿಕಾರಿಗಳನ್ನೇ ಬಂಧಿಸಿದ್ರಾ ಪೊಲೀಸರು..ಹೈಡ್ರಾಮಾ

ಪ್ರಧಾನಿ ಮೋದಿ-ಅಮಿತ್‌ ಶಾ ಜೋಡಿ ರಾಜಕೀಯ ಪ್ರತೀಕಾರಕ್ಕೆ ಯತ್ನಿಸುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆ ಉಳಿಯಬೇಕಿದೆ. ಇವತ್ತು ಮೆಟ್ರೋ ಚಾನೆಲ್‌ ಬಳಿಯೇ ಧರಣಿ ಕೂರುವೆ. ನಾಳೆಯಿಂದ ವಿಧಾನಸಭೆಯ ಎಲ್ಲ ಕೆಲಸಗಳನ್ನೂ ಇಲ್ಲಿಂದಲೇ ಮಾಡುತ್ತೇನೆ ಎಂದು ಗುಡುಗಿದ್ದಾರೆ. ಇನ್ನೊಂದು ಕಡೆ ಕರ್ತವ್ಯಕ್ಕೆ ಅಡ್ಡಿ ಮಾಡಲಾಗಿದೆ ಎಂದು ಸಿಬಿಐ ಸುಪ್ರೀಂ ಕೋರ್ಟ್ ಕದ ತಟ್ಟಿದೆ.

ಸದ್ಯ ಅಹೋರಾತ್ರಿ ಧರಣಿ ಕುಳಿತಿದ್ದು ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರಕಾರ ಮತ್ತು ಮಮತಾ ನಡುವಿನ ತಿಕ್ಕಾಟ ನಾಳೆಯಿಂದ ಮತ್ತಷ್ಟು ಜೋರಾದರೆ ಅಚ್ಚರಿ ಇಲ್ಲ.

loader