ತಮಿಳುನಾಡಿನ ಗಂಗೈಕೊಂಡನ್​ ಬಳಿಯ ಪೆಪ್ಸಿ ಕೋಕಕೋಲ ಕಂಪೆನಿಗಳು ನದಿ ಮೂಲದ ನೀರನ್ನು ಬಳಸಿ ಪಾನೀಯವನ್ನು ಬಾಟಲ್​'ಗಳಿಗೆ ತುಂಬಿಸುತ್ತಿರುವುದು ನೀರಿನ ಅಭಾವ ಹೆಚ್ಚಳಕ್ಕೆ ಕಾರಣವಾಗಿದೆ. ಜತೆಗೆ ಈ ಭಾಗದಲ್ಲಿ ಕೃಷಿ ಹಾಗೂ ಕುಡಿಯುವ ನೀರಿಗೆ  ಹಾಹಾಕಾರ ತಲೆದೋರಿರುವುದರಿಂದ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈ ಕೋರ್ಟ್​ ನದಿ ನೀರನ್ನು ಬಳಸದಂತೆ ಕಟ್ಟಪ್ಪಣೆ ಹೊರಡಿಸಿದೆ.

ನವದೆಹಲಿ(ನ.02): ನದಿ ನೀರನ್ನು ಬಳಸಿ ಕೋಕಾಕೋಲ ಹಾಗೂ ಪೆಪ್ಸಿ ತಯಾರಿಸುತ್ತಿದ್ದ ತಮಿಳುನಾಡಿನಲ್ಲಿನ ಕಂಪೆನಿಗಳಿಗೆ ಹೈ ಕೋರ್ಟ್​ ಸರಿಯಾಗಿಯೇ ಚಾಟಿ ಬೀಸಿದೆ.

ತಮಿಳುನಾಡಿನ ಗಂಗೈಕೊಂಡನ್​ ಬಳಿಯ ಪೆಪ್ಸಿ ಕೋಕಕೋಲ ಕಂಪೆನಿಗಳು ನದಿ ಮೂಲದ ನೀರನ್ನು ಬಳಸಿ ಪಾನೀಯವನ್ನು ಬಾಟಲ್​'ಗಳಿಗೆ ತುಂಬಿಸುತ್ತಿರುವುದು ನೀರಿನ ಅಭಾವ ಹೆಚ್ಚಳಕ್ಕೆ ಕಾರಣವಾಗಿದೆ. ಜತೆಗೆ ಈ ಭಾಗದಲ್ಲಿ ಕೃಷಿ ಹಾಗೂ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿರುವುದರಿಂದ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈ ಕೋರ್ಟ್​ ನದಿ ನೀರನ್ನು ಬಳಸದಂತೆ ಕಟ್ಟಪ್ಪಣೆ ಹೊರಡಿಸಿದೆ.

ಅಲ್ಲದೇ ಬೋರ್​ ವೆಲ್​ ಮೂಲಕ ಮಿತಿ ಮೀರಿದ ನೀರನ್ನು ಕಂಪೆನಿಗಳು ಹೊರತೆಗೆಯುತ್ತಿರುವುದಕ್ಕೆ ನ್ಯಾಯಾಲಯ ಗರಂ ಆಗಿದೆ. ಅಂತರ್ಜಲದ ಮಟ್ಟ ಕುಸಿಯುತ್ತಿರುವುದನ್ನು ಮನಗಂಡ ಕೋರ್ಟ್​ ಕಂಪೆನಿಗೆ ಮಿತಿ ಮೀರಿದ ನೀರು ಬಳಸುವುದನ್ನು ನಿಲ್ಲಿಸುವಂತೆ ಸೂಚಿಸಿದೆ.