ನಮ್ಮ ಬೆಂಗಳೂರು ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಸರ್ಕಾರವು ಸಾರ್ವಜನಿಕರು ಹಾಗೂ ನಗರ ಯೋಜನಾ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿ ನಂತರ ಮುಂದುವರಿಯಬೇಕು. ಅಲ್ಲಿಯವರೆಗೆ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಂಗಳೂರು(ನ.03): ಸ್ಟೀಲ್ ಪ್ಲೈಓವರ್ ಯೋಜನೆಗೆ ಹಸಿರು ನ್ಯಾಯಾಧಿಕರಣ ತಡೆ ನೀಡಿ ಒಂದು ವಾರ ಕಳೆಯುವುದರೊಳಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ಕೂಡ ಈ ವಿವಾದಿತ ಯೋಜನೆಗೆ ತಡೆನೀಡಿದೆ. ಈ ಮೂಲಕ ನಮ್ಮ ಬೆಂಗಳೂರು ಫೌಂಡೇಶನ್’ಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ.