ಸಿಎಂ ಸಿದ್ದರಾಮಯ್ಯಗೆ ಹೈ ಕೋರ್ಟ್ ನೋಟಿಸ್..!

First Published 15, Mar 2018, 3:10 PM IST
High Court Give Notice To CM Siddaramaiah
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ  ಹೈ ಕೋರ್ಟ್ ನೋಟಿಸ್ ನೀಡಿದೆ.

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ  ಹೈ ಕೋರ್ಟ್ ನೋಟಿಸ್ ನೀಡಿದೆ. ಬಿಎಸ್ ಯಡಿಯೂರಪ್ಪ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಬಿಎಸ್’ವೈ  ಹೈ ಕೋರ್ಟ್’ನಲ್ಲಿ ರಿಟ್ ಅರ್ಜಿ ಅಲ್ಲಿಸಿದ್ದರು. ಈ ನಿಟ್ಟಿನಲ್ಲಿ ಕೋರ್ಟ್ ನೋಟಿಸ್ ನೀಡಿದೆ.  ಅಲ್ಲದೇ ಇದೇ ವೇಳೆ ದಿನೇಶ್ ಗುಂಡೂರಾವ್, ಉಗ್ರಪ್ಪ  ಸೇರಿ ಇತರೆ ಕಾಂಗ್ರೆಸ್ ಮುಖಂಡರು ಹಾಗೂ ಮಾಧ್ಯಮಗಳಿಗೂ ಕೂಡ ನೋಟಿಸ್ ಜಾರಿ ಮಾಡಲಾಗಿದೆ.

ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಮಾಧ್ಯಮಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡದಂತೆ ನಿರ್ಭಂಧ ಹೇರುವಂತೆ ಕೋರಿ ಬಿಎಸ್’ವೈ ಸಲ್ಲಿಸಿದ್ದ ರಿಟ್ ಅರ್ಜಿ ಸಂಬಂಧ ಇದೀಗ ನೋಟಿಸ್ ನೀಡಲಾಗಿದೆ.

loader