ಎಂಬಿಬಿಎಸ್ ಸೀಟ್’ಗೆ ನಿಯಮ ಮೀರಿ  ಕೋಟಿಗಟ್ಟಲೇ ಶುಲ್ಕ ವಸೂಲಿ ಮಾಡಿರುವುದಕ್ಕೆ  ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿದೆ.  ಕೋಲಾರದ ದೇವರಾಜ್ ಅರಸ್ ಮೆಡಿಕಲ್ ಕಾಲೇಜ್  ಎಂಬಿಬಿಎಸ್ ಸೀಟು ನೀಡುವುದಾಗಿ 27 ಲಕ್ಷ ಹಣ ಮತ್ತು ಮೂಲ ದಾಖಲೆ ಪಡೆದು ಸೀಟು ನೀಡದೇ ಹಣವನ್ನೂ ವಾಪಸ್ ನೀಡದೇ ವಂಚನೆ ಆರೋಪ ಎದುರಿಸುತ್ತಿದೆ. 

ಬೆಂಗಳೂರು (ಜೂ. 14): ಎಂಬಿಬಿಎಸ್ ಸೀಟ್’ಗೆ ನಿಯಮ ಮೀರಿ ಕೋಟಿಗಟ್ಟಲೇ ಶುಲ್ಕ ವಸೂಲಿ ಮಾಡಿರುವುದಕ್ಕೆ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿದೆ. 

ಕೋಲಾರದ ದೇವರಾಜ್ ಅರಸ್ ಮೆಡಿಕಲ್ ಕಾಲೇಜ್ ಎಂಬಿಬಿಎಸ್ ಸೀಟು ನೀಡುವುದಾಗಿ 27 ಲಕ್ಷ ಹಣ ಮತ್ತು ಮೂಲ ದಾಖಲೆ ಪಡೆದು ಸೀಟು ನೀಡದೇ ಹಣವನ್ನೂ ವಾಪಸ್ ನೀಡದೇ ವಂಚನೆ ಆರೋಪ ಎದುರಿಸುತ್ತಿದೆ. 

ದಾಖಲೆ ವಾಪಸ್ಸು ನೀಡದ ಕಾಲೇಜ್ ವಿರುದ್ದ ಅಜಯ್ ಜಯಕುಮಾರ್ ನಾಯರ್ ಎಂಬ ವಿದ್ಯಾರ್ಥಿ ರಿಟ್ ಸಲ್ಲಿಸಿದ್ದಾರೆ. 2017 - 18 ನೇ ಸಾಲಿನ ಎಂಬಿಬಿಎಸ್ ಸೀಟ್’ಗಾಗಿ ಅಜಯ್ ಜಯಕುಮಾರ್ ಕೌನ್ಸಲಿಂಗ್’ಗೆ ಹಾಜರಾಗಿದ್ದರು. ಕಾಲೇಜು ಕೌನ್ಸಲಿಂಗ್ ಗೂ ಮೊದಲೇ 27 ಲಕ್ಷ ರೂ ಹಾಗೂ ಮಾರ್ಕ್ಸ್ ಕಾರ್ಡ್, ಟಿಸಿ ಗಳನ್ನು ಪಡೆದಿತ್ತು. ಅದರೆ ಕೌನ್ಸಲಿಂಗ್ ಬಳಿಕ ಸೀಟು ನೀಡದೇ, ಕಟ್ಟಿದ ಶುಲ್ಕ ಮತ್ತು ದಾಖಲೆ ವಾಪಸ್ಸು ನೀಡದೇ ವಂಚನೆ ಮಾಡಿದೆ ಎಂದು ಅಜಯ್ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದಾರೆ. 

ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮೂಲ ದಾಖಲೆಗಳನ್ನು ತಕ್ಷಣ ಹಿಂದಿರುಗಿಸುವಂತೆ ಹೈಕೋರ್ಟ್ ದ್ವೀಸದಸ್ಯ ಪೀಠ ಸರ್ಕಾರ ಮತ್ತು ಕಾಲೇಜು ಆಡಳಿತ ಮಂಡಳಿಗೆ ನೊಟೀಸ್ ನೀಡಿದೆ.