ನವದೆಹಲಿ(ಅ.1): ಪಾಕ್‌ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಭಾರತದ ವಿಶೇಷ ಸೇನಾ ಪಡೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿರುವುದಕ್ಕೆ ಪ್ರತಿಯಾಗಿ ಉಗ್ರ ಮಸೂದ್‌ ಅಜರ್‌ ನೇತೃತ್ವದ ಪಾಕಿಸ್ತಾನದ ಜೈಶ್‌ ಎ ಮೊಹಮ್ಮದ್‌ ಮತ್ತು ಮೌಲಾನಾ ಅಬ್ದುರ್‌ ರೆಹಮಾನ್‌ ತಂಡದವರಿಂದ ರಾಷ್ಟ್ರ ರಾಜಧಾನಿ ದಿಲ್ಲಿಗೆ ಭಯೋತ್ಪಾದಕ ದಾಳಿಯ ಬೆದರಿಕೆ ಉಂಟಾಗಿದೆ. ಪೊಲೀಸರ ಪ್ರಕಾರ ಲಷ್ಕರ್‌ ಎ ತಯ್ಬಾ ಅಥವಾ ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ದಿಲ್ಲಿ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ತೀರ ಕಡಿಮೆ ಇದೆ. ಮಸೂದ್‌ ಅಜರ್‌ನ ಸಮೂಹದವರು ವಾಟ್ಸಾಪ್‌ ಮತ್ತು ಫೇಸ್‌ ಬುಕ್‌ ಬಳಸಿಕೊಂಡು ಭಾರತೀಯ ತರುಣರನ್ನು ನೇಮಕಾತಿ ಮಾಡಿಕೊಳ್ಳಲು ಯತ್ನಿಸುತ್ತಿರುವುದು ಗೊತ್ತಾಗಿದೆ. ಹೀಗಾಗಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.