ಸೋಮವಾರ ತಡರಾತ್ರಿ ಕಡೂರಿಗೆ ಬಂದ ಅವರು ನಂಜುಂಡೇಶ್ವರ ಲಾಡ್ಜ್ 'ನಲ್ಲಿ ತಂಗಿದ್ದಾರೆ. ಇವ್ರು ತಂಗಿದ್ದ ರೂಮಿನ ಪಕ್ಕದಲ್ಲಿಯೇ ಲಾಡ್ಜ್ ಸಿಬ್ಬಂದಿ ರೂಮ್ ಇದ್ದು,ಗೋಡೆಯಿಂದ ಬೆಳಕು ಬಂದಿದೆ. ಇದನ್ನು ನೋಡಿದ ದಂಪತಿ ಅನುಮಾನಗೊಂಡು ಪಕ್ಕದ ರೂಮಿನ ಬಾಗಿಲು ಬಡಿದಾಗ ಒಳಗಿದ್ದ ಇಬ್ಬರು ಲಾಡ್ಜ್ ಸಿಬ್ಬಂದಿಗಳು ಗಾಬರಿಗೊಂಡು ಓಡಿ ಹೋಗಿದ್ದಾರೆ. ನಂತರ ನಿನ್ನೆ ಬೆಳಗ್ಗೆ ಎದ್ದು ಸಿಬ್ಬಂದಿ ರೂಮಿಗೆ ಹೋಗಿ ಪರಿಶೀಲಿಸಿದಾಗ ರಹಸ್ಯ ರಂಧ್ರಗಳನ್ನು ಕೊರೆದಿರುವುದು ಕಂಡುಬಂದಿದೆ.

ಚಿಕ್ಕಮಗಳೂರು(ಡಿ.21): ಆ ದಂಪತಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಟ್ಟಣದಲ್ಲಿ ಇರುವ ಲಾಡ್ಜ್'ವೊಂದರಲ್ಲಿ ತಂಗಿದ್ದರು. ಮಧ್ಯರಾತ್ರಿಯಲ್ಲಿ ಇದ್ದಕ್ಕಿದಂತೆ ಪಕ್ಕದ ಕೋಣೆಯಿಂದ ಬೆಳಕು ಕಾಣಿಸಿತ್ತು. ಗಾಬರಿಗೊಂಡ ದಂಪತಿ ಆ ರೂಮಿಗೆ ತೆರಳಿ ಪರಿಶೀಲನೆ ಮಾಡಿಸಿದ್ದಾಗ ಅವ್ರಿಗೆ ಶಾಕ್ ಆಯ್ತು. ಅಷ್ಟಕ್ಕೂ ಆ ರೂಮ್‌'ನಲ್ಲಿ ಏನಿತ್ತು ಗೊತ್ತಾ? ಇಲ್ಲಿದೆ ಲಾಡ್ಜ್ ಸಿಬ್ಬಂದಿಯ ನೀಚಕೃತ್ಯದ ಸಂಪೂರ್ಣ ವಿವರ.

ಇದೀಗ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಇರುವ ನಂಜುಂಡೇಶ್ವರ ಲಾಡ್ಜ್ ನಲ್ಲಿ ಗ್ರಾಹಕರು ತಂಗುವ ರೂಮಿನ ಗೋಡೆಗೆ ರಹಸ್ಯವಾಗಿ ರಂಧ್ರ ಕೊರೆದು ಸಿಬ್ಬಂದಿಗಳು ವೀಕ್ಷಿಸುತ್ತಿದ್ದರು ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

 ಈ ಪ್ರಕರಣ ಬೆಳಕಿಗೆ ಬರಲು ಕಾರಣವಾಗಿದ್ದು ಬಾಗಲಕೋಟೆ ಮೂಲದ ದಂಪತಿ. ಸೋಮವಾರ ತಡರಾತ್ರಿ ಕಡೂರಿಗೆ ಬಂದ ಅವರು ನಂಜುಂಡೇಶ್ವರ ಲಾಡ್ಜ್ 'ನಲ್ಲಿ ತಂಗಿದ್ದಾರೆ. ಇವ್ರು ತಂಗಿದ್ದ ರೂಮಿನ ಪಕ್ಕದಲ್ಲಿಯೇ ಲಾಡ್ಜ್ ಸಿಬ್ಬಂದಿ ರೂಮ್ ಇದ್ದು,ಗೋಡೆಯಿಂದ ಬೆಳಕು ಬಂದಿದೆ. ಇದನ್ನು ನೋಡಿದ ದಂಪತಿ ಅನುಮಾನಗೊಂಡು ಪಕ್ಕದ ರೂಮಿನ ಬಾಗಿಲು ಬಡಿದಾಗ ಒಳಗಿದ್ದ ಇಬ್ಬರು ಲಾಡ್ಜ್ ಸಿಬ್ಬಂದಿಗಳು ಗಾಬರಿಗೊಂಡು ಓಡಿ ಹೋಗಿದ್ದಾರೆ. ನಂತರ ನಿನ್ನೆ ಬೆಳಗ್ಗೆ ಎದ್ದು ಸಿಬ್ಬಂದಿ ರೂಮಿಗೆ ಹೋಗಿ ಪರಿಶೀಲಿಸಿದಾಗ ರಹಸ್ಯ ರಂಧ್ರಗಳನ್ನು ಕೊರೆದಿರುವುದು ಕಂಡುಬಂದಿದೆ.

ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಆಗಮಸಿದ ಕರವೇ ಬಣದ ಕಾರ್ಯಕರ್ತರು ಲಾಡ್ಜ್ ಮುಂದೆ ಪ್ರತಿಭಟಿಸಿದರು. ನಂಜುಂಡೇಶ್ವರ ಲಾಡ್ಜ್ ಬೀರೂರು ಮೂಲದ ಬಿಜೆಪಿ ಮುಖಂಡ ನಾಗರಾಜು ಎಂಬುವರಿಗೆ ಸೇರಿದ ಲಾಡ್ಜ್ ಆಗಿದೆ. ರೂಂ ನಂ 104 ನಲ್ಲಿ ಬಾಗಲಕೋಟೆ ಮೂಲದ ದಂಪತಿ ತಂಗಿದ್ದ ವೇಳೆ ಮಧ್ಯರಾತ್ರಿ ಮೊಬೈಲ್'ನಲ್ಲಿ ಸೆರೆಹಿಡಿಯಲಾಗಿದೆ ಎನ್ನಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಲಾಡ್ಜ್ ಸಿಬ್ಬಂದಿ ಹಾಗೂ ಮಾಲೀಕ ಪರಾರಿಯಾಗಿದ್ದಾರೆ.

ಈ ಹಿಂದೆ ಮಂಗಳೂರು ಯುನಿರ್ವಸಿಟಿ ಲೇಡಿಸ್ ಹಾಸ್ಟೆಲ್ ಟಾಯ್ಲೆಟ್ ಹಾಗೂ A2B ಬೆಂಗಳೂರು ಲೇಡಿಸ್ ಟಾಯ್ಲೆಟ್‌ನಲ್ಲಿ ರಂಧ್ರ ಕೊರೆದಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಸದ್ಯ ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.