ಗಾಂಧೀಜಿ ಕೊನೆಯದಾಗಿ 'ಹೇ ರಾಮ್' ಎಂದರಾ?

Hey Ram Mahatma Gandhiji Last Sentence
Highlights

‘ಗಾಂಧೀಜಿಯವರು ಸಾಯುವ ಸಂದರ್ಭದಲ್ಲಿ ‘ಹೇ ರಾಮ್’ ಎಂಬ ನುಡಿಗಳನ್ನು ಹೇಳಿಲ್ಲ’ ಎಂದು ಅವರ ಅಂದಿನ ಆಪ್ತ ಕಾರ್ಯದರ್ಶಿ ವೆಂಕಿಟ ಕಲ್ಯಾಣಂ (96) ಹೇಳಿದ್ದಾರೆ ಎಂಬುದು 2006 ರಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ ತಾವು ಹಾಗೆ ಹೇಳಿರಲಿಲ್ಲ. ತಮ್ಮ ಹೇಳಿಕೆಯನ್ನು ಅಂದು ತಪ್ಪಾಗಿ ಅರ್ಥೈಸಿ ಮಾಧ್ಯಮಗಳು ವರದಿ ಮಾಡಿದ್ದವು ಎಂದು ಕಲ್ಯಾಣಂ ಸ್ಪಷ್ಟಪಡಿಸಿದ್ದಾರೆ.

ಚೆನ್ನೈ (ಜ.31): ‘ಗಾಂಧೀಜಿಯವರು ಸಾಯುವ ಸಂದರ್ಭದಲ್ಲಿ ‘ಹೇ ರಾಮ್’ ಎಂಬ ನುಡಿಗಳನ್ನು ಹೇಳಿಲ್ಲ’ ಎಂದು ಅವರ ಅಂದಿನ ಆಪ್ತ ಕಾರ್ಯದರ್ಶಿ ವೆಂಕಿಟ ಕಲ್ಯಾಣಂ (96) ಹೇಳಿದ್ದಾರೆ ಎಂಬುದು 2006 ರಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ ತಾವು ಹಾಗೆ ಹೇಳಿರಲಿಲ್ಲ. ತಮ್ಮ ಹೇಳಿಕೆಯನ್ನು ಅಂದು ತಪ್ಪಾಗಿ ಅರ್ಥೈಸಿ ಮಾಧ್ಯಮಗಳು ವರದಿ ಮಾಡಿದ್ದವು ಎಂದು ಕಲ್ಯಾಣಂ ಸ್ಪಷ್ಟಪಡಿಸಿದ್ದಾರೆ.

ಗಾಂಧಿ ಹತ್ಯೆಯ ದಿನವಾದ ಜ.30 ರಂದು ಪಿಟಿಐ ಸುದ್ದಿ ಸಂಸ್ಥೆಯ ಜತೆ ಮಾತನಾಡಿದ ಕಲ್ಯಾಣಂ, ‘ಗಾಂಧೀಜಿ ‘ಹೇ ರಾಮ್’ ಎಂದು ಹೇಳಲಿಲ್ಲ ಎಂದು ನಾನು ಹೇಳಿಲ್ಲ. ಆ ಸಂದರ್ಭದಲ್ಲಿ ಗಾಂಧೀಜಿb‘ಹೇ ರಾಮ್’ ಎಂದು ಹೇಳಿದ್ದು ನನಗೆ ಕೇಳಿಲ್ಲ. ಅವರು ಹೇ ರಾಮ್ ಎಂದು ಹೇಳಿರಲೂಬಹುದು. ಆದರೆ ನನಗಂತೂ ಕೇಳಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಗಾಂಧೀಜಿಯವರು ಸಾಯುವ ಸಂದರ್ಭದಲ್ಲಿ ‘ಹೇ ರಾಮ್’ ಎಂಬ ನುಡಿಗಳನ್ನು ಹೇಳಿಲ್ಲ’ ಎಂದು ಅವರು 2006 ರಲ್ಲಿ ಕೇರಳದ ಕೊಲ್ಲಂನಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದರು ಎಂಬುದು ದೊಡ್ಡ ಸುದ್ದಿಯಾಗಿತ್ತು. ಕಲ್ಯಾಣಂ ಹೇಳಿಕೆಯನ್ನು ಗಾಂಧೀಜಿ ಮೊಮ್ಮಗ ತುಷಾರ್ ಗಾಂಧಿ ತಿರಸ್ಕರಿಸಿದ್ದರು.

 

loader