[ವೈರಲ್ ಚೆಕ್] ಬಾಲಿವುಡ್ ತಾರೆ ಶ್ರೀ ದೇವಿ ಪುನರ್ಜನ್ಮ..!

Heres The Real Story Behind The Sridevi Rebirth
Highlights

ಬಾಲಿವುಡ್ ತಾರೆ ಶ್ರೀದೇವಿಯವರ ಹಠಾತ್ ನಿಧನ ಅಭಿಮಾನಿಗಳಿಗೆ ಮತ್ತು ಅವರ ಕುಟುಂಬಕ್ಕೆ ಆಘಾತ ತಂದಿದ್ದು ಪ್ರತಿಯೊಬ್ಬರೂ ಕಂಬನಿ ಮಿಡಿದಿದ್ದಾರೆ. ‘

ಮುಂಬೈ : ಬಾಲಿವುಡ್ ತಾರೆ ಶ್ರೀದೇವಿಯವರ ಹಠಾತ್ ನಿಧನ ಅಭಿಮಾನಿಗಳಿಗೆ ಮತ್ತು ಅವರ ಕುಟುಂಬಕ್ಕೆ ಆಘಾತ ತಂದಿದ್ದು ಪ್ರತಿಯೊಬ್ಬರೂ ಕಂಬನಿ ಮಿಡಿದಿದ್ದಾರೆ. ‘ಚಾಂದಿನಿ’ ಅಂತ್ಯಸಂಸ್ಕಾರ ಕೂಡ ಮುಗಿದಿದೆ. ಆದರೆ ಕೆಲ ಸುದ್ದಿ ಮಾಧ್ಯಮಗಳು ಶ್ರೀದೇವಿ ಅವರ ನಿಗೂಢ ಸಾವಿನ ಬಗ್ಗೆ ಸಂವೇದನಾ ರಹಿತ ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ, ಇದೀಗ ಮುದ್ದಾದ ಮಗುವಿನ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ‘ಶ್ರೀದೇವಿಯವರು ಪುನರ್ಜನ್ಮ ಪಡೆದಿದ್ದಾರೆ’ ಎಂದು ಬಿಂಬಿಸಲಾಗುತ್ತಿದೆ.

ವಿಡಿಯೋದಲ್ಲಿರುವ ಮಗು ಶ್ರೀದೇವಿಯವರ ಮುಖ ಮತ್ತು ಕಣ್ಣುಗಳನ್ನೇ ಹೋಲುತ್ತಿದೆ. ಹಾಗಾಗಿ ಈ ವಿಡಿಯೋ ಅಪ್‌ಲೋಡ್ ಮಾಡಿ ಮಗುವಿನ ರೂಪದಲ್ಲಿ ಶ್ರೀದೇವಿ ಪುನರ್ಜನ್ಮ ಪಡೆದಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದೊಂದೇ ಅಲ್ಲದೆ ಶ್ರೀದೇವಿ ಪುನರ್ಜನ್ಮ ಕುರಿತ ನೂರಾರು ವಿಡಿಯೋ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಆಗುತ್ತಿವೆ.

ಕೆಲ ರಾಷ್ಟ್ರೀಯ ಮಾಧ್ಯಮಗಳೂ ಈ ಸುದ್ದಿಯನ್ನು ವರದಿ ಮಾಡಿವೆ. ಆದರೆ ನಿಜಕ್ಕೂ ‘ಚಾಂದಿನಿ’ ಪುನರ್ಜನ್ಮ ಪಡೆದಿದ್ದಾರೆಯೇ ಎಂದರೆ, ಈ ಸುದ್ದಿ ಸುಳ್ಳು.

ಈ ವಿಡಿಯೋ ಕಳೆದ 8 ತಿಂಗಳಿನಿಂದ ಹರಿದಾಡುತ್ತಿದೆ. ಈ ವಿಡಿಯೋಗೂ ‘ಪುನರ್ಜನ್ಮ’ಕ್ಕೂ ಸಂಬಂಧ ಇಲ್ಲ. ಶ್ರೀದೇವಿ ಪುನರ್ಜನ್ಮ ಪಡೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದೂ ಇದೀಗ ಹೇಳಲಾಗಿದೆ.

loader