ಸುರಕ್ಷಿತ ಚಾಲನೆ ಹಾಗೂ ಉತ್ತಮ ಸೇವೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ ಆರ್‌ಟಿಸಿ) ಚಾಲಕರು ಮಾತ್ರ ಇಷ್ಟು ದಿನ ಮುಖ್ಯಮಂತ್ರಿಗಳ ಚಿನ್ನ ಮತ್ತು ಬೆಳ್ಳಿಯ ಪದಕ ಗೌರವಕ್ಕೆ ಪಾತ್ರರಾಗುತ್ತಿದ್ದರು. ಇನ್ನು ಮುಂದೆ ಅಪಘಾತ ರಹಿತ ಚಾಲನೆ ಮಾಡುವ ‘ಚಾಲಕ ಕಂ ನಿರ್ವಾಹಕ’ರಿಗೂ ಚಿನ್ನ ಮತ್ತು ಬೆಳ್ಳಿಯ ಪದಕ ಹಾಗೂ ನಗದು ಪುರಸ್ಕಾರ ಪಡೆಯುವ ಅವಕಾಶ ಒಲಿದು ಬಂದಿದೆ.

ಬೆಂಗಳೂರು(ಜು.29): ಸುರಕ್ಷಿತ ಚಾಲನೆ ಹಾಗೂ ಉತ್ತಮ ಸೇವೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ ಆರ್‌ಟಿಸಿ) ಚಾಲಕರು ಮಾತ್ರ ಇಷ್ಟು ದಿನ ಮುಖ್ಯಮಂತ್ರಿಗಳ ಚಿನ್ನ ಮತ್ತು ಬೆಳ್ಳಿಯ ಪದಕ ಗೌರವಕ್ಕೆ ಪಾತ್ರರಾಗುತ್ತಿದ್ದರು. ಇನ್ನು ಮುಂದೆ ಅಪಘಾತ ರಹಿತ ಚಾಲನೆ ಮಾಡುವ ‘ಚಾಲಕ ಕಂ ನಿರ್ವಾಹಕ’ರಿಗೂ ಚಿನ್ನ ಮತ್ತು ಬೆಳ್ಳಿಯ ಪದಕ ಹಾಗೂ ನಗದು ಪುರಸ್ಕಾರ ಪಡೆಯುವ ಅವಕಾಶ ಒಲಿದು ಬಂದಿದೆ.

ಕೆಎಸ್‌ಆರ್‌ಟಿಸಿಯು ನಿಗಮದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅಪಘಾತ ರಹಿತ ಮತ್ತು ಅಪರಾ‘ ರಹಿತ ಸೇವೆ ಸಲ್ಲಿಸುವ ಚಾಲಕ ಕಂ ನಿರ್ವಾಹಕರಿಗೂ ಪುರಸ್ಕರಿಸುವ ನಿರ್ಧಾರ ಕೈಗೊಂಡಿದ್ದು, ಅರ್ಹ ಚಾಲಕ ಕಂ ನಿರ್ವಾಹಕರ ಪಟ್ಟಿ ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ಆಗಸ್ಟ್ 1ಕ್ಕೆ ಬೆಳ್ಳಿ ಪದಕ, ಅಕ್ಟೋಬರ್ 2ಕ್ಕೆ ಚಿನ್ನದ ಪದಕ ನೀಡಲಾಗುತ್ತದೆ.

ಹೇಗಿರುತ್ತದೆ ಪದಕ?

ಚಿನ್ನದ ಪದಕದಲ್ಲಿ 32 ಗ್ರಾಂ ಬೆಳ್ಳಿ ಪದಕದ ಮೇಲೆ 8 ಗ್ರಾಂ ಚಿನ್ನದ ಗಂಡಭೇರುಂಡ ಚಿಹ್ನೆ ಇರಲಿದೆ. ಬೆಳ್ಳಿ ಪದಕ 32 ಗ್ರಾಂ ಇರಲಿದೆ.