ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಲು ಹಾಗೂ ಮುಥುರಾವನ್ನು ಪ್ರವಾಸಿ ಸ್ನೇಹಿಯಾಗಿಸುವ ಉದ್ದೇಶದಿಂದ ಹೇಮಾ ಮಾಲಿನಿ ಬೇಟಿ ನೀಡಿದ್ದರು

ಆಗ್ರಾ(ನ.05): ಬಿಜೆಪಿ ಸಂಸದೆ ಹಾಗೂ ಬಾಲಿವುಡ್​ ಡ್ರೀಮ್ ಗರ್ಲ್ ಹೇಮಾಮಾಲಿನಿ ಮಥುರಾ ಜಂಕ್ಷನ್ ಫ್ಲಾಟ್'ಫಾರ್ಮ್ ಬಳಿ ತಿವಿಯಲು ಬಂದ ಗೂಳಿಯಿಂದ ಪಾರಾದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಲು ಹಾಗೂ ಮುಥುರಾವನ್ನು ಪ್ರವಾಸಿ ಸ್ನೇಹಿಯಾಗಿಸುವ ಉದ್ದೇಶದಿಂದ ಹೇಮಾ ಮಾಲಿನಿ ಬೇಟಿ ನೀಡಿದ್ದರು. ಆಗ ಬೀದಿ ಗೂಳಿಯೊಂದು ನಿಲ್ದಾಣದ ಒಳಕ್ಕೆ ನುಗ್ಗಿ ಬಂದಿದೆ. ಅದೃಷ್ಟಾವಶಾತ್​ ಹೇಮಾಮಾಲಿನಿ ಕೂದಲೆಳೆ ಅಂತರದಲ್ಲಿ ಗೂಳಿಯಿಂದ ಪಾರಾಗಿದ್ದಾರೆ. ಹೇಮಾ ಮಾಲನಿಗೆ ಯಾವುದೇ ಗಾಯವಾಗಿಲ್ಲ ಎಂದು ವರದಿಯಾಗಿದೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತ ಪ್ಲಾಟ್ ಫಾರ್ಮನಲ್ಲಿ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಜಂಕ್ಷನ್ ಮಾಸ್ಟರ್'​​ರನ್ನು ಸಸ್ಪೆಂಡ್​​ ಮಾಡಲಾಗಿದೆ.