ಇವತ್ತು ಕೂಡಾ ರಾಜ್ಯದ ಮೂಲೆ ಮೂಲೆಯಿಂದ ಜನ ಕರೆ ಮಾಡಿ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡ್ರು. ಎಲ್ಲಾ ಸಮಸ್ಯೆಗಳನ್ನ ಕೇಳಿಸಿಕೊಂಡ ಸಚಿವರೇ ಖುದ್ದಾಗಿ ದೂರುಗಳನ್ನ ದಾಖಲಿಸಿಕೊಂಡರು.
ಹಲೋ ಮಿನಿಸ್ಟರ್.. ಪ್ರತಿವಾರವೂ ಒಬ್ಬ ಸಚಿವರನ್ನ ಕರೆಯಿಸಿ ರಾಜ್ಯದ ಜನತೆಗೆ ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳೋಕೆ ಸುವರ್ಣ ನ್ಯೂಸ್ ಮಾಡಿರುವ ವೇದಿಕೆ . ಈ ಬಾರಿ ನಮ್ಮ ಹಲೋ ಮಿನಸ್ಟರ್ ಕಾರ್ಯಕ್ರಮದ ಮುಖ್ಯಅತಿಥಿ ಆರೋಗ್ಯ ಸಚಿವ ರಮೇಶ್ ಕುಮಾರ್ .
ಇವತ್ತು ಕೂಡಾ ರಾಜ್ಯದ ಮೂಲೆ ಮೂಲೆಯಿಂದ ಜನ ಕರೆ ಮಾಡಿ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡ್ರು. ಎಲ್ಲಾ ಸಮಸ್ಯೆಗಳನ್ನ ಕೇಳಿಸಿಕೊಂಡ ಸಚಿವರೇ ಖುದ್ದಾಗಿ ದೂರುಗಳನ್ನ ದಾಖಲಿಸಿಕೊಂಡರು. ಜೊತೆಗೆ ಸಮಸ್ಯೆಗಳನ್ನ ಶೀಘ್ರವಾಗಿ ಪರಿಹರಿಸುವ ವಾಗ್ದಾನ ನೀಡಿದರು.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಈ ಕುರಿತ ಬೆಳಕು ಚೆಲ್ಲಿದ ಸುವರ್ಣ ನ್ಯೂಸ್ ವರದಿಗೆ ಸ್ಪಂದಿಸಿದ ಸಚಿವರು ಹಾಸನದ ಡಿಹೆಚ್ಒಗೆ ತರಾಟೆಗೆ ತೆಗೆದುಕೊಂಡರು. ಇನ್ನೂ ಮದ್ದೂರಿನಿಂದ ಕರೆ ಮಾಡಿದ್ದ ಮೇಘನಾ ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಬಗ್ಗೆ ಮಾತಾಡಿದರು. ಅಲ್ಲದೆ ಆಸ್ಪತ್ರೇಲಿ ಸ್ವಚ್ಛತೆ ಇಲ್ಲ ಅಂತಾನೂ ಹೇಳಿದರು.
ಸಾರ್ವಜನಿಕರು ರಾಜ್ಯದ ಮೂಲೆ ಮೂಲೆಯಿಂದ ಕರೆ ಮಾಡಿ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡರು. ಒಟ್ಟಿನಲ್ಲಿ ಈ ಬಾರಿ ಕೂಡಾ ಹಲೋ ಮಿನಿಸ್ಟರ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.
