Asianet Suvarna News Asianet Suvarna News

ಬೆಂಗಳೂರಿನಲ್ಲಿ ಭಾರೀ ಸಂಚಾರ ದಟ್ಟಣೆ

ಸಾಲು ಸಾಲು ರಜೆಯಿಂದ ಊರುಗಳತ್ತ ತೆರಳಿದವರು ವಾಪಸ್ ಬೆಂಗಳೂರಿಗೆ ಆಗಮಿಸಿದ್ದು ಇದರಿಂದ ಭಾರೀ ಪ್ರಮಾಣದಲ್ಲಿ ನೆಲಮಂಗಲದ ಬಳಿ ಸಂಚಾರ ದಟ್ಟಣೆ ನಿರ್ಮಾಣವಾಯಿತು. 

Heavy Traffic Jam In Bengaluru
Author
Bengaluru, First Published Oct 22, 2018, 8:00 AM IST
  • Facebook
  • Twitter
  • Whatsapp

ಬೆಂಗಳೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರಿಗೆ ತೆರಳಿದ್ದವರು ವಾಪಸ್ ಭಾನುವಾರ ಮಧ್ಯಾಹ್ನದ ಮೇಲೆ ಒಮ್ಮೆಲೇ ಬೆಂಗಳೂರಿನತ್ತ ಮುಖ ಮಾಡಿದ್ದರಿಂದ ಭಾರೀ ಪ್ರಮಾಣದಲ್ಲಿ ನೆಲಮಂಗಲದ ಬಳಿ ಸಂಚಾರ ದಟ್ಟಣೆ ನಿರ್ಮಾಣವಾಯಿತು. 

ಊರಿಗೆ ತೆರಳಿದ್ದವರು ಭಾರೀ ಸಂಖ್ಯೆಯಲ್ಲಿ ಬೆಂಗಳೂರಿಗೆ ವಾಪಾಸ್ಸಾಗಿದ್ದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಬೆಂಗಳೂರು- ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಸಂ ಚಾರ ದಟ್ಟಣೆ ನಿರ್ಮಾಣವಾಗಿ ನಿಧಾನ ಗತಿಯ ಸಂಚಾರ ಸೃಷ್ಟಿಯಾಯಿತು. 

ನೆಲಮಂಗಲದ ನವಯುಗ, ಜಾಸ್, ಲ್ಯಾಂಕೋ ಟೋಲ್, ಕುಣಿಗಲ್ ಬೈಪಾಸ್ ಬಳಿ ಭಾರೀ ಪ್ರಮಾಣದಲ್ಲಿ ವಾಹನ ದಟ್ಟಣೆ ಕಂಡು ಬಂತು. ಜನರು ಬಸ್‌ಗಳ ಟಾಪ್ ಮೇಲೇರಿ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಪೊಲೀಸ್ ಹಾಗೂ ಟೋಲ್ ಸಿಬ್ಬಂದಿ ಹರಸಾಹಸ ಪಟ್ಟರು.

(ಸಾಂದರ್ಬಿಕ ಚಿತ್ರ)

Follow Us:
Download App:
  • android
  • ios