ಅಸ್ಸಾಂನಲ್ಲಿ ಕೂಡಾ ಭಾರೀ ಮಳೆಯಿಂದಾಗಿ 21 ಜಿಲ್ಲೆಗಳ ಸುಮಾರು 22.5 ಲಕ್ಷ ಜನ ಪ್ರವಾಹ ಪೀಡಿತರಾಗಿದ್ದಾರೆ.

ಗುವಾಹಟಿ(ಆ.14): ಉತ್ತರ ಹಾಗೂ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಮತ್ತೆ ಜಲಪ್ರಳಯವಾಗತೊಡಗಿದೆ.

ಬಿಹಾರ ಹಾಗೂ ನೆರೆಯ ನೇಪಾಳದಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಬಿಹಾರದ ನದಿಗಳಲ್ಲಿ ಪ್ರವಾಹ ಭೀತಿ ಹೆಚ್ಚತೊಡಗಿದ್ದು, ಸೇನೆ ಹಾಗೂ ವಾಯುಪಡೆಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸೀಂಗ್ ಅವರನ್ನು ಕೋರಿದ್ದಾರೆ.

ಸೀಮಾಂಚಲದ ಸುಮಾರು ಅರ್ಧ ಡಜನ್ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಳ್ಳಿಗಳೆಲ್ಲ ನಡುಗಡ್ಡೆಗಳಂತೆ ಭಾಸವಾಗುತ್ತಿವೆ. ಇನ್ನು ಅಸ್ಸಾಂನಲ್ಲಿ ಕೂಡಾ ಭಾರೀ ಮಳೆಯಿಂದಾಗಿ 21 ಜಿಲ್ಲೆಗಳ ಸುಮಾರು 22.5 ಲಕ್ಷ ಜನ ಪ್ರವಾಹ ಪೀಡಿತರಾಗಿದ್ದಾರೆ. ಈಗಾಗಲೇ 10 ಜನ ಮೃತಪಟ್ಟಿದ್ದು, ಪ್ರವಾಹ ಪರಿಹಾರಕ್ಕೆ ಸೇನೆಗೆ ಬುಲಾವ್ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈಲು ಸೇವೆ ಅಸ್ತವ್ಯಸ್ತವಾಗಿದೆ.