ಜೆಡ್ಡಾ:  ಬಹುತೇಕ ಮರಳುಗಾಡನ್ನು ಹೊಂದಿರುವ ಹಲವು ಕೊಲ್ಲಿ ರಾಷ್ಟ್ರಗಳಲ್ಲಿ ಕಳೆದ 3 - 4 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಪ್ರವಾಹ ಸದೃಶ್ಯ ವಾತಾವರಣ ಸೃಷ್ಟಿಯಾಗಿದೆ. ಚಂಡಮಾರುತದ ಪರಿಣಾಮ ಸೌದಿ ಅರೇಬಿಯಾದ ಬಹುತೇಕ ಭಾಗಗಳಲ್ಲಿ 3 - 4  ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ.

ಸರ್ಕಾರ, ರೆರ್ಡ್ ಅಲರ್ಟ್ ಘೋಷಿಸಿದೆ. ಜೊತೆಗೆ ಶಾಲೆಗಳಿಗೆ ರಜೆ ಘೋಷಿಸಿದೆ. ಪ್ರವಾಹದಿಂದಾಗಿ ಮರಳುಗಾಡಿನ ಹಲವೆಡೆ ನದಿಯ ರೀತಿಯಲ್ಲಿ ನೀರು ಹರಿಯುತ್ತಿದೆ. ಕುವೈತ್‌ನಲ್ಲಿ ಸರ್ಕಾರಿ ಕಚೇರಿಗಳು, ಷೇರುಪೇಟೆ, ಶಾಲೆಗಳಿಗೆ ರಜೆ ಪ್ರಕಟಿಸಲಾಗಿದೆ. 

ಭಾರೀ ಮಳೆಯಿಂದಾಗಿ ಉಂಟಾದ ಪರಿಸ್ಥಿತಿ ನಿರ್ವಹಣೆಗೆ ವಿಫಲರಾದ ರಸ್ತೆ ಮತ್ತು ಸಾರಿಗೆ ಸಚಿವರನ್ನೇ ಹುದ್ದೆಯಿಂದ ವಜಾಗೊಳಿಸಲಾಗಿದೆ. ಇನ್ನು ರಿಯಾದ್‌ನ ಕಿಂಗ್ ಖಾಲಿದ್ ವಿಮಾನ ನಿಲ್ದಾಣದ ಒಳಗೆ ಮಳೆ ನೀರು ಭಾರೀ ಪ್ರಮಾಣದಲ್ಲಿ ಸೋರುತ್ತಿದ್ದು, ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ.