ಮುಂಬೈ [ಜೂ.29] : ಪ್ರಸಕ್ತ ಮುಂಗಾರು ಋತುವಿನಲ್ಲಿ ಮುಂಬೈ ಮೊದಲ ಬಾರಿ ಭಾರೀ ಮಳೆಗೆ ಶುಕ್ರವಾರ ಸಾಕ್ಷಿಯಾಗಿದೆ. ಮಳೆ ಸಂಬಂಧಿ ಅನಾಹುತಗಳಲ್ಲಿ ಮೂವರು ಸಾವಿಗೀಡಾಗಿದ್ದು, 5 ಮಂದಿ ಗಾಯಗೊಂಡಿದ್ದಾರೆ. 

ಕಳೆದ 45 ವರ್ಷಗಳಲ್ಲೇ ಅತಿ ವಿಳಂಬವಾಗಿ ಮುಂಗಾರು ಮುಂಬೈ ಅನ್ನು ಪ್ರವೇಶಿಸಿದೆ. 

ಶುಕ್ರವಾರ ಮುಂಜಾನೆ ಮುಂಜಾನೆ 10 ರಿಂದ  11 ಗಂಟೆಯ ಅವಧಿಯಲ್ಲಿ 17 ರಿಂದ 22 ಮಿಲಿ ಮೀಟರ್ ಮಳೆ ಸುರಿದಿದ್ದರಿಂದ ಸಂಚಾರ ವ್ಯವಸ್ಥೆ ಕೆಲಹೊತ್ತು ಸಂಪೂರ್ಣ ಸ್ತಬ್ಧಗೊಂಡಿತ್ತು ಮುಂಬೈನಲ್ಲಿ ಇನ್ನೂ ಎರಡು ದಿನ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.