ಬೆಂಗಳೂರು(ಡಿ.13): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ವಾಧ್ರಾ ಚಂಡಮಾರುತದ ಬಿಸಿ ಸಿಲಿಕಾನ್ ಸಿಟಿಗೂ ತಟ್ಟಿದೆ. ನಗರದಲ್ಲಿ ನಿನ್ನೆ ಸಂಜೆಯಿಂದಲೂ ಮಳೆ ಸುರಿಯುತ್ತಲೇ ಇದೆ. ಈ ಕುರಿತಾದ ಡಿಟೇಲ್ಸ್ ಇಲ್ಲಿದೆ ನೋಡಿ.

ಬೆಂಗಳೂರಲ್ಲಿ ರಾತ್ರಿಯಿಡಿ ಸುರಿದ ವರ್ಷಧಾರೆ

ನಗರದ ಆಡುಗೋಡಿ, ಕೋರಮಂಗಲ, ಶಾಂತಿನಗರ, ಮಲ್ಲೇಶ್ವರಂ, ವಿಜಯನಗರ, ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ಕಾರ್ಪೊರೇಷನ್ ಸರ್ಕಲ್  ನಾನಾ ಕಡೆ ಭಾರೀ ಮಳೆಯಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.

ಇಂದಿರಾನಗರದಲ್ಲಿ ಮರವೊಂದು ಧರೆಗುರುಳಿದೆ. ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದ್ದು. ಇಂದು ಮತ್ತು ನಾಳೆ ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ತಿಳಿಸಿದ್ದಾರೆ.

ಬಿಬಿಎಂಪಿ ಈಗಾಗಲೇ ಸಹಾಯವಾಣಿಯನ್ನು ಆರಂಭಿಸಿದೆ. ಮೇಯರ್ ಜಿ.ಪದ್ಮಾವತಿಯವರು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡಿರುವುದಾಗಿ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ನಿನ್ನೆಗಿಂತಲೂ ಇಂದು ಮಳೆಯ ತೀವ್ರತೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಪಾಲಿಕೆ ಹಾಗೂ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಮುಖ್ಯ.