ನಿನ್ನೆಯಿಂದ  ಶಬರಿಮಲೈ ಸುತ್ತಮುತ್ತ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಭಕ್ತರ ಸುರಕ್ಷತಾ ದೃಷ್ಟಿಯಿಂದ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ರಾತ್ರಿ ಪ್ರಯಾಣವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.  

ತಿರುವನಂತಪುರಂ (ನ.30): ನಿನ್ನೆಯಿಂದ ಶಬರಿಮಲೈ ಸುತ್ತಮುತ್ತ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಭಕ್ತರ ಸುರಕ್ಷತಾ ದೃಷ್ಟಿಯಿಂದ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ರಾತ್ರಿ ಪ್ರಯಾಣವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಶಬರಿಮಲೈ ಸುತ್ತಮುತ್ತ ನಿರಂತರ ಮಳೆಯಾಗುತ್ತಿದ್ದು ನೂರಾರು ಮೀನುಗಾರರು ನಾಪತ್ತೆಯಾಗಿದ್ದಾರೆ. ತ್ರಿವೇಂಡ್ರಮ್, ಪಟ್ಟನಮ್ ತಿಟ್ಟ ಜಿಲ್ಲೆಗಳಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದ್ದು ಸಮುದ್ರಕ್ಕೆ ಹೋಗಿದ್ದ ಮೀನುಗಾರರು ಈವರೆಗೂ ಪತ್ತೆಯಾಗಿಲ್ಲ. 150ಕ್ಕೂ ಹೆಚ್ಚು ಮೀನುಗಾರರು ಕಣ್ಮರೆಯಾಗಿದ್ದು ನಾಲ್ವರು ದುರ್ಮರಣ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶಬರಿಮಲೈ ಯಾತ್ರಿಗಳು ಸುರಕ್ಷತೆ ಬಗ್ಗೆ ಗಮನಹರಿಸಲು ಶಬರಿಮಲೈ ದೇವಸ್ಥಾನ ಮಂಡಳಿ ಸೂಚನೆ ನೀಡಿದೆ.