ಮಹಾಮಳೆಗೆ ಬೋಟ್ ಮುಳುಗಡೆ; ಮುಂದುವರೆದ ಶೋಧ ಕಾರ್ಯ

Heavy Rain fall in Coastal area
Highlights

ಕರಾವಳಿ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿದ್ದು ಹೊನ್ನಾವರ ಸಮೀಪ ತಮಿಳುನಾಡು ಮೂಲದ ಏಂಜಲ್ ಎನ್ನುವ ಬೋಟ್ ಮುಳುಗಡೆಯಾಗಿದೆ. ಬೋಟ್ ನಲ್ಲಿ ಆರು ಜನ ಮೀನುಗಾರರಿದ್ದರು. ಸ್ಥಳೀಯ ಮೀನುಗಾರಿಕಾ ಬೋಟ್ ನಾಲ್ವರನ್ನ ರಕ್ಷಣೆ ಮಾಡಿದ್ದು  ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ.  

ಮಂಗಳೂರು (ಮೇ. 30): ಕರಾವಳಿ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿದ್ದು ಹೊನ್ನಾವರ ಸಮೀಪ ತಮಿಳುನಾಡು ಮೂಲದ ಏಂಜಲ್ ಎನ್ನುವ ಬೋಟ್ ಮುಳುಗಡೆಯಾಗಿದೆ. ಬೋಟ್ ನಲ್ಲಿ ಆರು ಜನ ಮೀನುಗಾರರಿದ್ದರು. ಸ್ಥಳೀಯ ಮೀನುಗಾರಿಕಾ ಬೋಟ್ ನಾಲ್ವರನ್ನ ರಕ್ಷಣೆ ಮಾಡಿದ್ದು  ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ. 

ಡೋಯನಿಯರ್ ಹೆಲಿಕಾಪ್ಟರ್ ಮೂಲಕ  ಆಳ‌ ಸಮುದ್ರದಲ್ಲಿ ಬೋಟ್ ಶೋಧ ಕಾರ್ಯ ಮುಂದುವರೆದಿದೆ.  ಪುಷ್ಪರಾಜ್(44), ಅನುರಾಜ್(25) ಎಂಬುವವರು ನೀರಿನಲ್ಲಿ ನಾಪತ್ತೆಯಾಗಿದ್ದಾರೆ.  ನಾಪತ್ತೆಯಾದ ಮೀನುಗಾರರಿಗಾಗಿ ಇಂದು ಶೋಧ ಕಾರ್ಯ ಮುಂದುವರೆದಿದೆ.  ಐಸಿಜಿ ಅಮಲ್ ಮತ್ತು ಐಸಿಜಿ ಸಾವಿತ್ರಿ ಬಾಯಿ ಪುಲೆ ಬೋಟ್ ಮೂಲಕವೂ ಶೋಧ ಕಾರ್ಯ ನಡೆಯುತ್ತಿದೆ. 

ನಿನ್ನೆ ಎಂಜಲ್ 2 ನಲ್ಲಿ ರಕ್ಷಿಸಲ್ಪಟ್ಟ 11 ಮೀನುಗಾರರು ರಾತ್ರಿ ಪರಾರಿಯಾಗಿದ್ದರು. ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಮತ್ತೆ ಹಿಡಿದು ತಂದಿದ್ದಾರೆ.   

loader