ಕೆ.ಆರ್​.ಸರ್ಕಲ್​, ಕಾರ್ಪೋರೇಷನ್​, ಕೆ.ಆರ್​. ಮಾರ್ಕೆಟ್​, ವಿಧಾನಸೌಧ, ಶಿವಾಜಿನಗರ, ಜೆ.ಸಿ. ನಗರ, ಮೇಖ್ರಿ ಸರ್ಕಲ್​,ಎಚ್​ಎಸ್​ಆರ್​ ಲೇಔಟ್​, ಮಡಿವಾಳ, ಮಂಗಮ್ಮನ ಪಾಳ್ಯ, ಬೇಗೂರು, ಬೊಮ್ಮನಹಳ್ಳಿ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ.

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆ ಆರ್ಭಟ ಮುಂದುವರಿದಿದೆ. ಇಂದು ಮುಂಜಾನೆಯಿಂದಲೇ ಮಳೆ ಶುರುವಾಗಿದ್ದು, ಬೆಂಗಳೂರಿಗರು ಆತಂಕಕ್ಕೆ ಒಳಗಾಗಿದ್ದಾರೆ.

ಕೆ.ಆರ್​.ಸರ್ಕಲ್​, ಕಾರ್ಪೋರೇಷನ್​, ಕೆ.ಆರ್​. ಮಾರ್ಕೆಟ್​, ವಿಧಾನಸೌಧ, ಶಿವಾಜಿನಗರ, ಜೆ.ಸಿ. ನಗರ, ಮೇಖ್ರಿ ಸರ್ಕಲ್​,ಎಚ್​ಎಸ್​ಆರ್​ ಲೇಔಟ್​, ಮಡಿವಾಳ, ಮಂಗಮ್ಮನ ಪಾಳ್ಯ, ಬೇಗೂರು, ಬೊಮ್ಮನಹಳ್ಳಿ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ.

ಜತೆಗೆ ಆನೇಕಲ್​ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಮಳೆಯಿಂದಾಗಿ ನಗರದ ವಾಹನ ಸವಾರರು ಹೈರಾಣಾಗಿದ್ದಾರೆ. ಆನೇಕಲ್​ಗೆ ಮೇಯರ್​ ಭೇಟಿ ನೀಡಿ ಪರಿಶೀಲಿಸಿದರು. ಜತೆಗೆ ಬೆಂಗಳೂರಿನ ಅನೇಕ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಳೆ ಹೀಗೆ ಮುಂದುವರಿದರೆ ಇನ್ನೂ ಅನೇಕ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.