Asianet Suvarna News Asianet Suvarna News

ಮುಂಗಾರು ಮಳೆ ಚುರುಕು : ಭಾರೀ ಪ್ರಮಾಣದಲ್ಲಿ ಮಳೆ

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇದರಿಂದ ಬೆಂಗಳೂರು ಹಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. 

Heavy Monsoon Rain Lashes in Bangalore surrounding
Author
Bengaluru, First Published Jul 18, 2019, 7:48 AM IST
  • Facebook
  • Twitter
  • Whatsapp

ಬೆಂಗಳೂರು [ಜು.18] :  ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದ್ದು, ಬುಧವಾರ ರಾತ್ರಿ ನಗರದ ಕೆಲವೆಡೆ ಭಾರಿ ಪ್ರಮಾಣದಲ್ಲಿ ಮಳೆಯಾದ ವರದಿಯಾಗಿದೆ.

ಕಳೆದ ಮೂರು ದಿನಗಳಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಸುತ್ತಮುತ್ತ ಭಾಗದಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುತ್ತಿದೆ. ಬುಧವಾರ ನಗರದ ಪೂರ್ವ, ಕೇಂದ್ರ ಭಾಗದ ಕೆಲವೆಡೆ ಧಾರಾಕಾರವಾಗಿ ಗಾಳಿ ಸಹಿತ ಮಳೆ ಸುರಿದಿದೆ.

ಮರ ಹಾಗೂ ವಿದ್ಯುತ್‌ ಕಂಬ ಧರೆಗುರುಳಿರುವುದು, ಮನೆಗೆ ನೀರು ನುಗ್ಗಿರುವುದರ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸರಾಸರಿ 20 ಮಿ.ಮೀ ಮಳೆಯಾದ ವರದಿಯಾಗಿದೆ. ಬಾನಸವಾಡಿಯಲ್ಲಿ 18 ಮಿ.ಮೀ ಮಳೆಯಾಗಿದೆ. ರಾಜನಕುಂಟೆಯಲ್ಲಿ 14.5, ಅರಕೆರೆ, ಯಲಹಂಕದಲ್ಲಿ ತಲಾ 11, ರಾಮಮೂರ್ತಿ ನಗರ 10.5, ಬಿದರಹಳ್ಳಿ 8.5, ಸಂಪಂಗಿರಾಮನಗರ 8, ಸಾತನೂರು 6.5, ಅವಲಹಳ್ಳಿ 5.5 ಹಾಗೂ ಎಚ್‌ಎಎಲ್‌ನಲ್ಲಿ 3 ಮಿ.ಮೀ ಮಳೆ ಆಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

Follow Us:
Download App:
  • android
  • ios