Asianet Suvarna News Asianet Suvarna News

6 ವರ್ಷದ ಬಾಲಕಿ ಹೃದಯ 9 ವರ್ಷದ ಬಾಲಕನಿಗೆ ಕಸಿ

ಚಿತ್ರದುರ್ಗ ಮೂಲದ ಆರು ವರ್ಷದ ಬಾಲಕಿಯ ಹೃದಯವನ್ನು ಆಂಧ್ರಪ್ರದೇಶ ಮೂಲದ 9 ವರ್ಷದ ಬಾಲಕನಿಗೆ ಕಸಿ ಮಾಡುವಲ್ಲಿ ರಾಮಯ್ಯ ಆಸ್ಪತ್ರೆ ನಾರಾಯಣ ಹಾರ್ಟ್ ಕೇರ್ ಸೆಂಟರ್ ವೈದ್ಯರು ಯಶಸ್ವಿ ಯಾಗಿದ್ದಾರೆ. ಮನಿಂಜಿಯೋಮಾ (ಮೆದುಳಿನಲ್ಲಿ ಗಡ್ಡೆ) ರೋಗದಿಂದ ಬಳಲುತ್ತಿದ್ದ ಬಾಲಕಿಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

Heart Transplantation

ಬೆಂಗಳೂರು: ಚಿತ್ರದುರ್ಗ ಮೂಲದ ಆರು ವರ್ಷದ ಬಾಲಕಿಯ ಹೃದಯವನ್ನು ಆಂಧ್ರಪ್ರದೇಶ ಮೂಲದ 9 ವರ್ಷದ ಬಾಲಕನಿಗೆ ಕಸಿ ಮಾಡುವಲ್ಲಿ ರಾಮಯ್ಯ ಆಸ್ಪತ್ರೆ ನಾರಾಯಣ ಹಾರ್ಟ್ ಕೇರ್ ಸೆಂಟರ್ ವೈದ್ಯರು ಯಶಸ್ವಿ ಯಾಗಿದ್ದಾರೆ. ಮನಿಂಜಿಯೋಮಾ (ಮೆದುಳಿನಲ್ಲಿ ಗಡ್ಡೆ) ರೋಗದಿಂದ ಬಳಲುತ್ತಿದ್ದ ಬಾಲಕಿಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಬಾಲಕಿಯ ಮಿದುಳು ನಿಷ್ಕ್ರಿಯ ಗೊಂಡಿತ್ತು. ಬಳಿಕ ಆಸ್ಪತ್ರೆ ವೈದ್ಯರು ಅಂಗಾಂಗ ದಾನ ಮಾಡಲು ಬಾಲಕಿಯ ಪೋಷಕರ ಮನವೊಲಿಸಿದ್ದರು.ತಕ್ಷಣ ಎಚ್ಚೆತ್ತ ವೈದ್ಯರು ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ ಹೃದಯ ಕಾವಟು ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ 9 ವರ್ಷದ ಬಾಲಕನಿಗೆ ಹೃದಯ ಕಸಿ ಮಾಡಿದರು.

ಏರ್ ಆ್ಯಂಬುಲೆನ್ಸ್ ಬಳಕೆ: ಎ.ಜಿ. ಆಸ್ಪತ್ರೆಯ ವೈದ್ಯರು ಮೆದುಳು ನಿಷ್ಕ್ರಿಯ ಗೊಂಡಿರುವುದು ಖಚಿತಪಡಿಸಿದ ಕೂಡಲೇ ವಿಮಾನದ ಮೂಲಕ ಮಂಗಳೂರು ತೆರಳಿದ ಬೆಂಗಳೂರು ವೈದ್ಯರ ತಂಡವು, ಬಾಲಕಿಯ ಹೃದಯವನ್ನು ಏರ್ ಆ್ಯಂಬುಲೆನ್ಸ್ ಮೂಲಕ ಗುರುವಾರ ಸಂಜೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಂದರು.

ಅಲ್ಲಿಂದ 36 ಕಿ.ಮೀ. ದೂರದಲ್ಲಿರುವ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸಂಚಾರ ಪೊಲೀಸರು ಗ್ರೀನ್‌ಕಾರಿಡಾರ್ ವ್ಯವಸ್ಥೆಯೊಂದಿಗೆ 24 ನಿಮಿಷಗಳಲ್ಲೇ ಹೃದಯ ತಲುಪಿಸಲಾಯಿತು. ಬಳಿಕ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರಾದ ಯು.ಎಂ. ನಾಗಮಲ್ಲೇಶ್ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.

Follow Us:
Download App:
  • android
  • ios