ಬೆಂಗಳೂರು[ಜು. 28] ಸೋಮವಾರದ ವಿಶ್ವಾಸ ಮತ ಯಾಚನೆ ಕಾರಣಕ್ಕೆ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಆದರೆ ಜ್ವರದ ಕಾರಣಕ್ಕೆ ಸೋಮಣ್ಣ ಸಭೆಯಿಂದ ಹೊರನಡೆದಿದ್ದಾರೆ.

ನಾಳೆ ಯಡಿಯೂರಪ್ಪ ಬಹುಮತ ಸಾಬೀತು ಮಾಡ್ತಾರೆ. ಮೂರು ವರ್ಷ ಹತ್ತು ತಿಂಗಳು ಯಡಿಯೂರಪ್ಪ ಉತ್ತಮ ಆಡಳಿತ ಕೊಡ್ತಾರೆ. ಬರಗಾಲ ಸಂಬಂಧ ಪರಿಹಾರ ಕಾರ್ಯ ಕೈಗೊಳ್ತಾರೆ. ನನಗೆ ಜ್ವರ ಇದ್ದು  ನಾಯಕರ ಅನುಮತಿ ಪಡೆದು ಮನೆಗೆ ಹೊರಟಿದ್ದೇನೆ ಎಂದು ತಿಳಿಸಿದರು.

BSY ವಿಶ್ವಾಸ ಗೆಲ್ತಾರಾ? ಇಲ್ಲಿದೆ ಅಂಕಿ ಅಂಶಗಳ ಫುಲ್ ಡಿಟೇಲ್ಸ್

ಶಾಸಕಾಂಗ ಪಕ್ಷದ ಸಭೆ ಇನ್ನು ಮುಂದುವರಿದಿದ್ದು ವಿಶ್ವಾಸಮತ ಸಂದರ್ಭದ ಸವಾಲುಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.