ಜನರ ಆರೋಗ್ಯ ಕಾಪಾಡೇಕಾಗಿರೋದು ಆರೋಗ್ಯ ಇಲಾಖೆಯ ಕರ್ತವ್ಯ. ಆದರೆ ಆದ್ರೆ ಬೆಳಗಾವಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯೇ ಕುರಿಮಂದೆಯಾಗಿದೆ. ಆರೋಗ್ಯ ಇಲಾಖೆ ನೌಕರರು ಜನರ ಆರೋಗ್ಯ ಕಾಪಾಡುವುದನ್ನು ಬಿಟ್ಟು ಕುರಿಕಾಯುತ್ತಿದ್ದಾರೆ. ಏನಿದು ಸ್ಟೋರಿ ಅಂತೀರಾ? ಇಲ್ಲಿದೆ ವಿವರ
ಬೆಳಗಾವಿ(ಸೆ.01): ಜನರ ಆರೋಗ್ಯ ಕಾಪಾಡೇಕಾಗಿರೋದು ಆರೋಗ್ಯ ಇಲಾಖೆಯ ಕರ್ತವ್ಯ. ಆದರೆ ಆದ್ರೆ ಬೆಳಗಾವಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯೇ ಕುರಿಮಂದೆಯಾಗಿದೆ. ಆರೋಗ್ಯ ಇಲಾಖೆ ನೌಕರರು ಜನರ ಆರೋಗ್ಯ ಕಾಪಾಡುವುದನ್ನು ಬಿಟ್ಟು ಕುರಿಕಾಯುತ್ತಿದ್ದಾರೆ. ಏನಿದು ಸ್ಟೋರಿ ಅಂತೀರಾ? ಇಲ್ಲಿದೆ ವಿವರ
ಬೆಳಗಾವಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣ ಕುರಿ ಮಂದೆಯಾಗಿದೆ. ಇಲಾಖೆಯ ಆವರಣದಲ್ಲಿರುವ ಇಲಾಖೆ ಕ್ವಾಟರ್ಸ್ ಅಲ್ಲಿ ಕಳೆದ ೧೨ ವರುಷದಿಂದ ಇಲಾಖೆಯ ನೌಕರ ಗಜಾನನ ಕರಿಗಾರ ಎಂಬಾತ ೫೦ಕ್ಕೂ ಹೆಚ್ಚು ಕುರಿ ಮರಿಗಳನ್ನು ಸಾಕುತ್ತಿದ್ದಾನೆ. ಚಾಲಕ ವೃತ್ತಿಯನ್ನೇ ಮರೆತು ಕುರಿ ಕಾಯೋದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾನೆ. ಇಲಾಖೆಯ ಡಿಎಚ್ಒ ಅಪ್ಪಾಸಾಹೇಬ್ ನರಟ್ಟಿ, ತಮ್ಮ ಸಮುದಾಯದ ಈ ವಾಹನ ಚಾಲಕನಿಗೆ ಇಲಾಖೆಯ ಕ್ವಾಟ್ರಸ್‌ನಲ್ಲೇ ಕುರಿ ಸಾಕಾಣಿಕೆಗೆ ಮೂರು ಮನೆಗಲನ್ನು ನೀಡಿದ್ದಾರೆ. ಆದರೆ ಈಗ ಕೇಳಿದ್ರೆ ಗೊತ್ತೆ ಇಲ್ಲಾ ಅಂತಿದ್ದಾರೆ. ಇನ್ನೂ ಈ ಬಗ್ಗೆ ದೂರು ನೀಡಿದ್ರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ.
ಇನ್ನೂ ಈ ಬಗ್ಗೆ ಗಜಾನನ ಕರಿಗಾರನನ್ನು ಕೇಳಿದ್ರೆ, ತನ್ನ ನಮಗಳು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು ಆಕೆಗೆ ಕುರಿ ಹಾಲು ಕುಡಿಸಿ ಎಂದು ಹೇಳಿದ್ದಾರೆ. ಅದಕ್ಕೆ ಕುರಿಯನ್ನು ಕ್ವಾಟರ್ಸ್ ಅಲ್ಲಿ ಸಾಕ್ತಿದ್ದಾನೆ ಅಂತಾನೆ.
ಆರೋಗ್ಯ ಇಲಾಖೆ, ಜನರ ಆರೋಗ್ಯವನ್ನು ಕಾಪಾಡುವುದು ಬಿಟ್ಟು ಕುರಿ ಕಾಯುತ್ತಿದೆ. ಈಗಲಾದ್ರೂ ಆರೋಗ್ಯ ಸಚಿವರು, ಕುರಿ ಸಾಕುತ್ತಿರುವ ನೌಕರ ಹಾಗೂ ಕ್ವಾಟ್ರಸ್‌ನಲ್ಲೇ ಕುರಿ ಸಾಕಲು ಅವಕಾಶ ಮಾಡಿಕೊಟ್ಟಿರುವ ಡಿಎಚ್ಒ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ.
