ಮುಖಂಡ ಅಯನೂರು ಮಂಜುನಾಥ ಮಾತ್ರ ಜೆಡಿಎಸ್‌ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಈಶ್ವರಪ್ಪನವರೊಂದಿಗೆ ನಾನೂ ಕೆಲಸ ಮಾಡಿದ್ದೇನೆ.
ಬೆಂಗಳೂರು(ಜ.24): ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗಿಂತ ಮೇಲ್ಮನೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಕೆ.ಎಸ್.ಈಶ್ವರಪ್ಪನವರೇ ಸ್ಟ್ರಾಂಗ್ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈಶ್ವರಪ್ಪ ಜೆಡಿಎಸ್ಗೆ ಬರುತ್ತಾರೆಂದು ಬಿಜೆಪಿ ಯಿಂದಲೇ ಅಪಪ್ರಚಾರ ಆಗುತ್ತಿರುವಂತಿದೆ ಎಂದರು. 2005ರಲ್ಲಿ ಯಡಿಯೂರಪ್ಪ ನನ್ನ ಬಳಿ ಬಂದು ‘ಬಿಜೆಪಿ ಬಿಡುತ್ತೇನೆ. ಅನಂತಕುಮಾರ್ರ ಸಾಲ ವಾಪಸ್ ಮಾಡಲು ಏನಾದರೂ ವ್ಯವಸ್ಥೆ ಮಾಡಿಸಿ. ನನ್ನನ್ನು ಮಂತ್ರಿ ಮಾಡಿ' ಎಂದು ಕೋರಿದ್ದರು. ಅವರ ಪರವಾಗಿ ಬಳಿಕ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ರಾಮಚಂದ್ರಗೌಡರೂ ಬಂದಿದ್ದರು. ಆದರೆ ನಾನು ಅವರಿಗೆ ಆಗ ದಾರಿ ತಪ್ಪಿಸದೇ ಇದ್ದುದಕ್ಕೆ ಈಗ ಅನುಭವಿಸುತ್ತಿದ್ದೇನೆ. ಬಳಿಕ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು ಎಂದು ಕುಟುಕಿದರು.
