Asianet Suvarna News Asianet Suvarna News

ಪ್ರಜ್ವಲ್ ರೇವಣ್ಣ ಸೂಟ್'ಕೇಸ್ ಬಾಂಬ್'ಗೆ ಹೆಚ್'ಡಿಕೆ ಪ್ರತಿಕ್ರಿಯೆ

. ಸೂಟ್ ಕೇಸ್ ಕೊಟ್ಟವರನ್ನ ಮುಂದೆ ಕೂರಿಸುತ್ತೇವೆ. ಕೆಲವು ನಾಯಕರು ಇದ್ದಾರೆ. ಎರಡು ಪಕ್ಷಗಳಲ್ಲಿ ಕಾಲು ಇಟ್ಟುಕೊಂಡಿದ್ದಾರೆ. ದೂರದ ಬೆಟ್ಟ ಕಣ್ಣಿಗೆ ನುಣ್ಣು ಅನ್ನುವ ಹಾಗೆ ಈ ನಾಯಕರ ನಡವಳಿಕೆ' ಎಂದು ಅಸಮಾಧಾನ ಹೊರ ಹಾಕಿದ್ದರು.

HDK Reation about Prajwal revanna

ಬೆಂಗಳೂರು(ಜು.10): ಜೆಡಿಎಸ್ ಪಕ್ಷದಲ್ಲಿ ತಳಮಳ ಹುಟ್ಟಿಸಿದ್ದ ಪ್ರಜ್ವಲ್ ರೇವಣ್ಣ ಅವರ ಸೂಟ್'ಕೇಸ್ ಬಾಂಬ್'ಗೆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜೆಡಿಎಸ್​ ಪಕ್ಷದಲ್ಲಿ ಸೂಟ್ ಕೇಸ್ ಪಡೆಯುತ್ತಿದ್ದದ್ದು ನಿಜ. ಸೂಟ್​​ಕೇಸ್​​ ಕೊಟ್ಟವರು ಮುಂದಿನ ಸಾಲಿನಲ್ಲಿ ಕೂರುತ್ತಿದ್ದುದ್ದು ನಿಜ' ಎಂದು ಪ್ರಜ್ವಲ್ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸುತ್ತಾ  ಬಂಡಾಯ ಶಾಸಕರಿಗೆ ಟಾಂಗ್ ನೀಡಿದರು. ಆದರೆ ಈಗ ಸೂಟ್'ಕೇಸ್ ಕೊಟ್ಟವರೆಲ್ಲಾ ಈಗಾಗಲೇ ಪಕ್ಷ ಬಿಟ್ಟು ಹೊರಗಡೆ ಹೋಗಿದ್ದಾರೆ. ಬಂಡಾಯ ಶಾಸಕರ ಕುರಿತು ಪ್ರಜ್ವಲ್​ ಸೂಟ್​ಕೇಸ್​ ಹೇಳಿಕೆ ನೀಡಿರಬಹುದು. ನನ್ನನ್ನ ಕ್ಷಮೆ ಕೇಳೋದಕ್ಕೆ ಅವನೇನು ತಪ್ಪು ಮಾಡಿಲ್ಲ. ಈ ಹೇಳಿಕೆಯಲ್ಲಿ ನನ್ನನ್ನು ಕುರಿತು ಪ್ರಜ್ವಲ್​ ಮಾತನಾಡಿಲ್ಲ' ಎಂದು ತಿಳಿಸಿದರು.

ಎರಡು ದಿನಗಳ ಹಿಂದೆ ನಂಜನಗೂಡಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ' ನಮ್ಮ ಪಕ್ಷದಲ್ಲಿ ರೋಗವಿದ್ದು, ನಿಷ್ಠೆಯಿಂದ ಕೆಲಸ ಮಾಡುವವರನ್ನ ಹಿಂಬದಿ ಸೀಟಿನಲ್ಲಿ ಕೂರಿಸುತ್ತೇವೆ. ಸೂಟ್ ಕೇಸ್ ಕೊಟ್ಟವರನ್ನ ಮುಂದೆ ಕೂರಿಸುತ್ತೇವೆ. ಕೆಲವು ನಾಯಕರು ಇದ್ದಾರೆ. ಎರಡು ಪಕ್ಷಗಳಲ್ಲಿ ಕಾಲು ಇಟ್ಟುಕೊಂಡಿದ್ದಾರೆ. ದೂರದ ಬೆಟ್ಟ ಕಣ್ಣಿಗೆ ನುಣ್ಣು ಅನ್ನುವ ಹಾಗೆ ಈ ನಾಯಕರ ನಡವಳಿಕೆ' ಎಂದು ಅಸಮಾಧಾನ ಹೊರ ಹಾಕಿದ್ದರು.

ಈ ಘಟನೆಯ ನಂತರ ಪ್ರಜ್ವಲ್ ರೇವಣ್ಣ ಸ್ವತಃ ತಾತಾ ದೇವೇಗೌಡರ ಕ್ಷಮೆಯಾಚಿಸಿದ್ದರು. ಹೆಚ್.ಡಿ. ರೇವಣ್ಣ ಕೂಡ ಪ್ರಜ್ವಲ್ ಬಗ್ಗೆ ಹೆಚ್ಚು ಮಹತ್ವ ನೀಡಬೇಕಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

Follow Us:
Download App:
  • android
  • ios