ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನಕ್ಕೆ ಸಿದ್ಧವಾಗಿದೆ.ಪಕ್ಷ ಬಲವರ್ಧನೆಗೆ ಮುಂದಾಗಿರುವ ಜೆಡಿಎಸ್ ನ ರಾಜ್ಯಾಧ್ಯಕ್ಷ  ಹಾಗೂ  ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಕೊನೆಗೂ ಹುಬ್ಬಳ್ಳಿಯಲ್ಲಿ ಹೊಸ ಮನೆ ಮಾಡಿದ್ದಾರೆ. ಹುಬಳ್ಳಿಯ ಬೈರಿದೇವರಕೊಪ್ಪದ ಮಯಾಕರ್ ಕಾಲೋನಿಯಲ್ಲಿರುವ ಶ್ರೀ ಏಕದಂತ ಎಂಬ ಹೆಸರಿನ  ಹೊಸ ಮನೆಯನ್ನ ವಾಸ್ತವ್ಯಕ್ಕೆ ಅಂತಿಮಗೊಳಿಸಿದ್ದು, ಮನೆಯ ಗೋಡೆಯ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ನಿವಾಸದ ಹೆಸರು ಬೋರ್ಡ್​ ಹಾಕಲಾಗಿದೆ.