ಉತ್ತರ ಕರ್ನಾಟಕದಲ್ಲಿ ಸುಮಾರು 40-50 ಶಾಸಕರನ್ನು ಗೆಲ್ಲಿಸಬೇಕೆಂಬ ಮಹದಾಸೆಯಿಂದ ಇಲ್ಲಿಂದಲೇ ಸ್ಪರ್ಧಿಸಬೇಕೆಂಬ ಬಯಕೆಯಿದೆ.

ದೇವರಹಿಪ್ಪರಗಿ(ಜ.31): ರಾಮನಗರದ ಜನ ಒಪ್ಪಿದರೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಿಂದಲೂ ಸ್ಪರ್ಧಿಸಲು ಸಿದ್ಧ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮಂಗಳವಾರ ದೇವರಹಿಪ್ಪರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನಗೆ ರಾಜಕೀಯ ಜನ್ಮ ನೀಡಿದ ರಾಮನಗರದ ಜನತೆಯ ಅನುಮತಿ ಕೇಳಿಕೊಂಡು ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ನಿಲ್ಲುವ ಕುರಿತು ನಿರ್ಧರಿಸುತ್ತೇನೆ. ಉತ್ತರ ಕರ್ನಾಟಕದಲ್ಲಿ ಸುಮಾರು 40-50 ಶಾಸಕರನ್ನು ಗೆಲ್ಲಿಸಬೇಕೆಂಬ ಮಹದಾಸೆಯಿಂದ ಇಲ್ಲಿಂದಲೇ ಸ್ಪರ್ಧಿಸಬೇಕೆಂಬ ಬಯಕೆಯಿದೆ. ಆದರೆ, ರಾಮನಗರ ಮತ್ತು ನನ್ನದು ತಾಯಿ-ಮಗನ ಸಂಬಂಧ.

ಎರಡೂ ಕಡೆ ನಿಲ್ಲಬೇಕೆಂದರೆ ಅವರನ್ನು ಕೇಳಿಯೇ ನಿರ್ಧರಿಸುತ್ತೇನೆ. ಮುಂದಿನ ದಿನಗಳಲ್ಲಿ ದೇವರಹಿಪ್ಪರಗಿಯಿಂದ ನಮ್ಮ ಪಕ್ಷದ ಯಾರೇ ಶಾಸಕರಾದರೂ ಕುಮಾರಸ್ವಾಮಿಯವರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದಂತೆ. ಇಲ್ಲಿನ ಅಭಿವೃದ್ಧಿಗೆ ರಾಮನಗರದ ರೀತಿಯಲ್ಲೇ ನಿಗಾವಹಿಸುತ್ತೇನೆ ಎಂದು ಭರವಸೆ ನೀಡಿದರು.

ಫೆ.17ಕ್ಕೆ ಅಭ್ಯರ್ಥಿಗಳ ಪಟ್ಟಿ: ಇದಕ್ಕೂ ಮೊದಲು ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿ ಗಳ ಮೊದಲ ಪಟ್ಟಿಯನ್ನು ಫೆ.17ರಂದು ಬಿಡುಗಡೆ ಮಾಡಲಾಗುತ್ತದೆ.