ಈಗ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡಾ ಸಾಮಾಜಿಕ ಜಾಲತಾಣಗಳ ಲೋಕದೊಳಗೆ ಪ್ರವೇಶಿಸಿದ್ದಾರೆ. ಸಾಮಾನ್ಯವಾಗಿ ಇತರರು ಟ್ವೀಟರ್ ಹಾಗೂ ಫೇಸ್’ಬುಕ್’ನಲ್ಲಿ ಸಕ್ರಿಯರಾಗಿದ್ದರೆ, ಎಚ್’ಡಿಕೆ ಫೇಸ್’ಬುಕ್, ಟ್ವೀಟರ್ ಸೇರಿದಂತೆ ಯೂಟ್ಯೂಬ್, ಗೂಗಲ್+, ಹಾಗೂ ಸೌಂಡ್ ಕ್ಲೌಡ್’ನಲ್ಲೂ ತಮ್ಮ ಖಾತೆಯನ್ನು ತೆರೆದಿದ್ದಾರೆ.

ಸಾಮಾಜಿಕ ಸಂಪರ್ಕ ಜಾಲತಾಣಗಳ ಬಳಕೆಯ ಬಗ್ಗೆ ಇಂದು ಯಾವುದೇ ವಿವರಣೆ ಬೇಕಾಗಿಲ್ಲ. ವಿದ್ಯಾರ್ಥಿಗಳಿಂದ ಹಿಡಿದು, ವೃತ್ತಿಪರರು, ಮಾಧ್ಯಮದವರು, ತಾರೆಯರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ರಾಷ್ಟ್ರಪತಿಯವರೆಗೆ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಸಕ್ರಿಯರಾಗಿದ್ದಾರೆ. ಇದಕ್ಕೆ ರಾಜಕಾರಣಿಗಳು ಹೊರತಲ್ಲ. ಚುನಾವಣೆ ಸಂದರ್ಭಗಳಲ್ಲಂತೂ ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಕ್ರಿಯಾಶೀಲರಾಗುತ್ತಾರೆ.

ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವಾರು ನಾಯಕರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್ ಗುಂಡುರಾವ್, ಕೃಷ್ಣ ಭೈರೇಗೌಡ, ಡಿ.ಕೆ.ಶಿವಕುಮಾರ್, ಎಂ.ಬಿ ಪಾಟೀಲ್, ಬಿಜೆಪಿಯ ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಸುರೇಶ್ ಕುಮಾರ್ ಹಾಗೂ ಸಿ,ಟಿ.ರವಿ ಮೊದಲಾದ ನಾಯಕರು ರಾಜ್ಯ-ದೇಶದ ಆಗುಹೋಗುಗಳಿಗೆ ತಕ್ಷಣವಾಗಿ ಸ್ಪಂದಿಸುತ್ತಿದ್ದಾರೆ.

ಈಗ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡಾ ಸಾಮಾಜಿಕ ಜಾಲತಾಣಗಳಿಗೆ ಪ್ರವೇಶಿಸಿದ್ದಾರೆ. ಸಾಮಾನ್ಯವಾಗಿ ಇತರರು ಟ್ವೀಟರ್ ಹಾಗೂ ಫೇಸ್’ಬುಕ್’ನಲ್ಲಿ ಸಕ್ರಿಯರಾಗಿದ್ದರೆ, ಎಚ್’ಡಿಕೆ ಫೇಸ್’ಬುಕ್, ಟ್ವೀಟರ್ ಸೇರಿದಂತೆ ಯೂಟ್ಯೂಬ್, ಗೂಗಲ್+, ಹಾಗೂ ಸೌಂಡ್ ಕ್ಲೌಡ್’ನಲ್ಲೂ ತಮ್ಮ ಖಾತೆಯನ್ನು ತೆರೆದಿದ್ದಾರೆ.

"ಈ ಮಾಧ್ಯಮಗಳಲ್ಲಿ ತಕ್ಷಣದ ದ್ವಿಮುಖ ಸಂವಾದ ಸಾಧ್ಯವಿದೆ. ಹಾಗಾಗಿ ತಮ್ಮ ನೋಟ ಹಾಗೂ ನಡೆ ಇವುಗಳನ್ನು ಬಿಂಬಿಸಲು ಈ ಅಂತರ್ಜಾಲ ಆಧಾರಿತ ಸಾಮಾಜಿಕ ತಾಣಗಳನ್ನು ಇನ್ನು ಮುಂದೆ ಅತ್ಯಂತ ಪರಿಣಾಮಕಾರಿಯಾಗಿ ಬಳಸಲು ನಾನು ನಿರ್ಧರಿಸಿದ್ದೇನೆ. ಜನರತ್ತ ಸಾಗಲು, ಸಾಮಾಜಮುಖಿ ಕೆಲಸಗಳನ್ನು ಮಾಡಲು ಇರುವ ಯಾವುದೇ ರೀತಿಯ ಅವಕಾಶವನ್ನು ಬಳಸಿಕೊಳ್ಳುವುದು ನನ್ನ ಗುರಿ. ಹಾಗಾಗಿ ಸಾಮಾಜಿಕ ತಾಣಗಳನ್ನೂ ಸಹಾ ನಾನು ಬಳಸಿಕೊಳ್ಳಲು ಮುಂದಾಗಿದ್ದೇನೆ" ಎಂದು ಈ ಸಂದರ್ಭದಲ್ಲಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಖ್ಯಾತ ಕವಿ ರಾಬರ್ಟ್ ಫ್ರಾಸ್ಟ್ ಅವರ ಕವಿತೆಯನ್ನು ಟ್ವೀಟ್ ಮಾಡುವ ಮೂಲಕ ಎಚ್’ಡಿಕೆ ಟ್ವೀಟರ್’ಗೆ ಎಂಟ್ರಿ ನೀಡಿದ್ದಾರೆ.

ಸಾಮಾಜಿಕ ತಾಣಗಳ ಕೊಂಡಿ ಇಲ್ಲಿದೆ -


ಫೇಸ್’ಬುಕ್ 
https://www.facebook.com/Namma-HDK-997705723695221/

ಟ್ವೀಟರ್
https://twitter.com/nammahdk

ಗೂಗಲ್ ಪ್ಲಸ್
https://plus.google.com/u/0/118274661083989144622

ಯುಟ್ಯೂಬ್
https://www.youtube.com/channel/UCFSgZcqqFwNMXbabOYelIUQ

ಸೌಂಡ್ ಕ್ಲೌಡ್
https://soundcloud.com/kumaraswamy-hd