ಈ ಸಂಬಂಧ ರಾಜ್ಯ ಮತ್ತು  ರಾಷ್ಟ್ರ ನಾಯಕರ ಜೊತೆ ಚರ್ಚೆ ಕೂಡ ಆಗಿದೆ ಅಂತ ಬಾಂಬ್ ಸಿಡಿಸಿದರು.

ಬೆಂಗಳೂರು(ಮಾ.23): ಎಚ್​.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸ್ಫೋಟಿಸಿದ್ದಾರೆ. ಅದೂ ಅಂತಿಂಥ ಬಾಂಬ್ ಅಲ್ಲ. ಬರೋಬ್ಬರಿ 500 ಕೋಟಿಯ ಬಾಂಬ್​. ಅದೂ ಕಾಂಗ್ರೆಸ್ ಪಕ್ಷದ ವಿರುದ್ಧ ಅಲ್ಲ. ಬಿಜೆಪಿ ಹಾಗೂ ಪಕ್ಷದ ಮುಖಂಡರ ವಿರುದ್ಧ. ಬೆಂಗಳೂರಿನ ಸ್ವಾಭಿಮಾನಿ ಸಮಾವೇಶದಲ್ಲಿ ಮಾತಾಡಿದ ಎಚ್​​ಡಿಕೆ, ಮುಂದಿನ ವಿಧಾನಸಭಾ ಚುನಾವಣೆ ಜನಾರ್ದನ ರೆಡ್ಡಿ 500 ಕೋಟಿ ಖರ್ಚು ಮಾಡ್ತಿದ್ದಾರೆ. ಈ ಸಂಬಂಧ ರಾಜ್ಯ ಮತ್ತು ರಾಷ್ಟ್ರ ನಾಯಕರ ಜೊತೆ ಚರ್ಚೆ ಕೂಡ ಆಗಿದೆ ಅಂತ ಬಾಂಬ್ ಸಿಡಿಸಿದರು. ಯಾಕಂದರೆ ಇತ್ತೀಚೆಗೆ ಅಷ್ಟೇ ಜಾರಿ ನಿರ್ದೇಶನಾಲಯದ ರೆಡ್ಡಿ ವಿರುದ್ಧದ 900 ಕೋಟಿ ಆಸ್ತಿ ಪ್ರಕರಣವನ್ನ ರದ್ದು ಮಾಡಿತ್ತು. ಈ ಬೆನ್ನಲ್ಲೇ ಇಷ್ಟು ಬೆಳವಣಿಗೆ ನಡೆದಿದೆ ಅಂತ ಕೊಟ್ಟ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.