Asianet Suvarna News Asianet Suvarna News

ಸಿದ್ದರಾಮಯ್ಯ ಒಬ್ಬ ಓತ್ಲ ರೈತ

. ರಾಜಕಾರಣಕ್ಕೆ ಬರುವವರೆಗೆ ನಾನೂ ಕೃಷಿ ಮಾಡಿದ್ದೆ. ಶಾಲಾ ಕಾಲೇಜು ರಜೆಯಲ್ಲಿ ತಿಪ್ಪೆಯಿಂದ ಗೊಬ್ಬರ ಎತ್ತಿದ್ದೇನೆ. 50 ಸಾವಿರ ವರೆಗಿನ ಸಾಲ ಮನ್ನಾ ಘೋಷಣೆಯ ಹಣೆಬರಹ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತೆ ಎಂದಿದ್ದಾರೆ.

HDK Blame Siddaramaiah
  • Facebook
  • Twitter
  • Whatsapp

ಉಡುಪಿ(ಜೂ.25): ಸಿಎಂ ಸಿದ್ದರಾಮಯ್ಯ ಓತ್ಲ ರೈತ, ನಾವು ನಿಜವಾದ ರೈತರು ಹೀಗಂತ ಮಾಜಿ ಸಿಎಂ ಕುಮಾರಸ್ವಾಮಿ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

ಉಡುಪಿ ಕೃಷ್ಣಮಠ ಭೇಟಿಗೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಅವರು ರೈತರ ಪೇಟೆಂಟ್ ಪಡೆಯಲು ಸಾಧ್ಯವಿಲ್ಲ. ರಾಜಕಾರಣಕ್ಕೆ ಬರುವವರೆಗೆ ನಾನೂ ಕೃಷಿ ಮಾಡಿದ್ದೆ. ಶಾಲಾ ಕಾಲೇಜು ರಜೆಯಲ್ಲಿ ತಿಪ್ಪೆಯಿಂದ ಗೊಬ್ಬರ ಎತ್ತಿದ್ದೇನೆ. 50 ಸಾವಿರ ವರೆಗಿನ ಸಾಲ ಮನ್ನಾ ಘೋಷಣೆಯ ಹಣೆಬರಹ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತೆ ಎಂದಿದ್ದಾರೆ.

ರಾಷ್ಟ್ರಪತಿಗಳು ಕೃಷ್ಣಮಠಕ್ಕೆ ಬಂದಾಗ ಸಿಎಂ ಬರಬೇಕಿತ್ತು. ಪೇಜಾವರ ಶ್ರೀಗಳೇ ಆಹ್ವಾನಿಸಿದರೂ ತಿರಸ್ಕರಿಸಿದ್ದಾರೆ. ಇದರಿಂದ ಮಠಕ್ಕಾಗಲೀ, ಕೃಷ್ಣ ದೇವರಿಗಾಗಲೀ ನಷ್ಟವಿಲ್ಲ. ನಷ್ಟ ಸಿದ್ದರಾಮಯ್ಯನವರಿಗೆ. ಸಿಎಂ ಉದ್ದಟತನದಿಂದಲೇ ರಾಜ್ಯದಲ್ಲಿ ಕೆಟ್ಟಸ್ಥಿತಿ ಇದೆ. ಅದೇ ಕಾರಣಕ್ಕೆ ಈ ಬಾರಿ ಮಳೆಯೂ ಸರಿಯಾಗಿ ಆಗಿಲ್ಲ ಎಂದಿದ್ದಾರೆ. ರಷ್ಟ್ರಪತಿ ಅಭ್ಯರ್ಥಿಯಾಗಿ ಮಿರಾ ಕುಮಾರಿಗೆ ಬೆಂಬಲ ಘೋಷಿಸಿದ್ದೇವೆ. ಗುಲಾಂ ನಬೀ ಆಜಾದ್ ಇಂದು ಕರೆ ಮಾಡಿ ಬೆಂಬಲ ಕೋರಿದರು ಎಂದು ತಿಳಿಸಿದ್ದಾರೆ.

 

Follow Us:
Download App:
  • android
  • ios