ಯಾರು ಏನೇ ಮಾಡಿದ್ರೂ ಈ ಬಾರಿ ಇವರೇ ಸಿಎಂ ಅಂತೆ! ಇವರ ಜಾತಕದಲ್ಲಿದೆಯಂತೆ ಸಿಎಂ ಆಗೋ ಯೋಗ

First Published 24, Feb 2018, 9:57 PM IST
HDK Become CM in this Assembly Election says H D Deve Gowda
Highlights

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ  ಎಲ್ಲಾ ಪಕ್ಷಗಳಲ್ಲಿಯೂ ಸಿಎಂ ಯಾರಾಗಬಹುದೆಂಬ ಚರ್ಚೆ ಜೋರಾಗಿದೆ.  ರಾಜಕೀಯದಲ್ಲಿರುವ ಮುತ್ಸದ್ಧಿ ನಾಯಕರೊಬ್ಬರು ಮುಂದಿನ ಸಿಎಂ ಇವರೇ ಎಂದು ಭವಿಷ್ಯ ನುಡಿದಿದ್ದಾರೆ.  

ಬೆಂಗಳೂರು (ಫೆ.24): ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ  ಎಲ್ಲಾ ಪಕ್ಷಗಳಲ್ಲಿಯೂ ಸಿಎಂ ಯಾರಾಗಬಹುದೆಂಬ ಚರ್ಚೆ ಜೋರಾಗಿದೆ.  ರಾಜಕೀಯದಲ್ಲಿರುವ ಮುತ್ಸದ್ಧಿ ನಾಯಕರೊಬ್ಬರು ಮುಂದಿನ ಸಿಎಂ ಇವರೇ ಎಂದು ಭವಿಷ್ಯ ನುಡಿದಿದ್ದಾರೆ.  
 

ಎಚ್​​​ಡಿಕೆಗೆ ಸಿಎಂ ಹುದ್ದೆ ಭಾಗ್ಯ..!
ಈ ಬಾರಿ ಯಾರು ಏನೇ ಮಾಡಿದರೂ 2018ಕ್ಕೆ ಎಚ್.ಡಿ.ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗೋದು.  ಎಚ್’ಡಿಕೆ ಕುಂಡಲಿಯಲ್ಲಿದೆಯಂತೆ ಸಿಎಂ ಹುದ್ದೆ ಭಾಗ್ಯವಿದೆ. ನಾನೇ ಮನಸ್ಸು ಮಾಡಿದರೂ ಸಿಎಂ ಹುದ್ದೆ ಮಿಸ್ ಆಗಲ್ಲ ಎಂದು ರಾಜಕೀಯ ಮುತ್ಸದ್ಧಿ ಎಚ್. ಡಿ ದೇವೇಗೌಡ ಹೇಳಿದ್ದಾರೆ. 

ಜೆಡಿಎಸ್ ಶಾಸಕರ ಜತೆ ಮಾತನಾಡುತ್ತಾ '2018ರ ಈ ವರ್ಷದಲ್ಲಿ ಕುಮಾರಸ್ವಾಮಿಗೆ ಸಿಎಂ ಹುದ್ದೆ ಬ್ರಹ್ಮಲಿಖಿತ. ರಾಜಕೀಯ ಇತಿಹಾಸದಲ್ಲಿ ನನ್ನ ಮಾತು ಸುಳ್ಳಾಗಿಲ್ಲ ಎಂದಿದ್ದಾರೆ.  ಈ ಚುನಾವಣೆಯಲ್ಲಿ ನೀವು ಗೆದ್ದರೆ ನಿಮಗೆ ಸಚಿವ ಸ್ಥಾನ ಗ್ಯಾರಂಟಿ ಎಂದು ಜೆಡಿಎಸ್ ಪಕ್ಷದ ಪ್ರಭಾವಿ, ಜನಪ್ರಿಯ ಶಾಸಕರಿಗೆ ಗೌಡರು ಭರವಸೆ ನೀಡಿದ್ದಾರೆ.  ಕುಮಾರಸ್ವಾಮಿ ಸರ್ಕಾರ ಬರುತ್ತೆ ನೀವು ಸಚಿವರಾಗ್ತೀರೆಂದು ಭರವಸೆ ನೀಡಿದ್ದಾರೆ. 
 

loader