ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಅಂದರು

ಬೆಂಗಳೂರು(ಜೂ.23): ಎಸ್​ಐಟಿ ಅಧಿಕಾರಗಳ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಜಂತಕಲ್​​ ಮೈನಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ಗೆ ಮಧ್ಯಂತರ ವರದಿ ಸಲ್ಲಿಕೆಯಾಗಿದೆ ಅನ್ನೋ ವರದಿಗೆ ಎಚ್​ಡಿಕೆ ಫುಲ್​ ಗರಂ ಅಂದರು. ನನ್ನ ಮೇಲಿನ ಕೇಸ್ ಸಾಬೀತು ಮಾಡಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ. ನನ್ನ ಜೊತೆ ಹುಡುಕಾಟ ಆಡ್ತೀರಾ ಅಂತ ಎಸ್​​ಐಟಿ ಅಧಿಕಾರಿಗಳ ವಿರುದ್ಧ ಕೋಪ ವ್ಯಕ್ತಪಡಿಸಿದರು.