ರೈತನ ಮಗನಾಗಿ ನೈಸ್ ವಿರುದ್ದದ ಹೋರಾಟ ಮುಂದುವರೆಸುವೆ. ನೈಸ್ ಹಗರಣವನ್ನು ಸಿಬಿಐಗೆ ವಹಿಸಲಿ. ವೀರಾವೇಶದಿದ ಮಾತಾಡುತ್ತಿದ್ದ ಸಿಎಂ, ಕಂದಾಯ ಸಚಿವರು ನೈಸ್ ವಿಚಾರದಲ್ಲಿ ಮೌನಕ್ಕೆ ಜಾರಿದ್ದಾರೆ.
ಹಾಸನ(ಅ.07): ಕಾಂಗ್ರೆಸ್ಗೆ ಈ ಸ್ಥಿತಿ ಬರಬಾರದಿತ್ತು, ಜಮೀರ್ರನ್ನು ಡಿಸಿಎಂ ಮಾಡಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ರನ್ನು ಸಾಹೇಬ್ರೆ ಎಂದು ಗುಣಗಾನ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಡೆಗೆ ಮಾರ್ಮಿಕವಾಗಿ ನಕ್ಕ ಗೌಡರು, ಕಾಂಗ್ರೆಸ್ ಮೇಲೆತ್ತಲು ಜಮೀರ್ ಬೇಕಾಗಿದ್ದಾರೆ. 130 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ನಲ್ಲಿರುವ ಯಾವುದೇ ಮುಸ್ಲಿಂ ನಾಯಕರು ಜಮೀರ್ ಗೆ ಸಮಾನರಿಲ್ಲವೇ? ಎಂದು ಪ್ರಶ್ನಿಸಿದ ಗೌಡರು, ಕುಮಾರಸ್ವಾಮಿ ಅವರನ್ನು ಮಂತ್ರಿ ಮಾಡಿದ್ದರು. ಕಾಂಗ್ರೆಸ್ ನವರು ಡಿಸಿಎಂ ಮಾಡಲಿ ಎಂದು ಛೇಡಿಸಿದರು.
ನೈಸ್ ಹಗರಣವನ್ನು ಸಿಬಿಐ'ಗೆ ವಹಿಸಲಿ
ರೈತನ ಮಗನಾಗಿ ನೈಸ್ ವಿರುದ್ದದ ಹೋರಾಟ ಮುಂದುವರೆಸುವೆ. ನೈಸ್ ಹಗರಣವನ್ನು ಸಿಬಿಐಗೆ ವಹಿಸಲಿ. ವೀರಾವೇಶದಿದ ಮಾತಾಡುತ್ತಿದ್ದ ಸಿಎಂ, ಕಂದಾಯ ಸಚಿವರು ನೈಸ್ ವಿಚಾರದಲ್ಲಿ ಮೌನಕ್ಕೆ ಜಾರಿದ್ದಾರೆ. ಸೋನಿಯಾಗಾಂಧಿ ಅವರಿಗೆ ಪತ್ರ ಬರೆದು ಪ್ರಧಾನಿ ಅವರನ್ನು ಖುದ್ದು ಭೇಟಿ ಮಾಡಿ ಮನವರಿಕೆ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿಗೆ ಜಿ.ಟಿ.ಯೇ ಅಭ್ಯರ್ಥಿ
ನಿನ್ನೆ ಜಿ.ಟಿ.ದೇವೇಗೌಡರು ಸಿಎಂ ವಿರುದ್ಧ ವೀರಾವೇಶದಿಂದ ಮಾತನಾಡಿದ್ದನ್ನು ನಾನು ಗಮನಿಸಿದ್ದೇನೆ. ಹೀಗೆ ಮಾತನಾಡಿದ್ದನ್ನು ಹಿಂದೆಂದೂ ನಾನು ನೋಡಿರಲಿಲ್ಲ. ಸೋಲು-ಗೆಲುವು ಆಮೇಲೆ. ನೂರಕ್ಕೆ ನೂರರಷ್ಟು ಚಾಮುಂಡಿ ಕ್ಷೇತ್ರಕ್ಕೆ ಜಿ ಟಿ ದೇವೇಗೌಡರೇ ನಮ್ಮ ಪಕ್ಷದ ಅಭ್ಯರ್ಥಿ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.
ಇದೇ ತಿಂಗಳ 11 ರಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ರಾಜ್ಯದ 224 ಕ್ಷೇತ್ರಗಳ ಆಕಾಂಕ್ಷಿತ ಅಭ್ಯರ್ಥಿಗಳ ಸಭೆ ಕರೆಯಲಾಗಿದೆ. ಅನಾರೋಗ್ಯದ ನಡುವೆಯೂ ಕುಮಾರಸ್ವಾಮಿ ಅವರೂ ಭಾಗಿಯಾಗಲಿದ್ದಾರೆ' ಎಂದು ತಿಳಿಸಿದರು.
