ಮಂಡ್ಯ ಜಿಲ್ಲೆ ಒಗ್ಗಟ್ಟಿನ ಮೂಲಕ ರಾಜ್ಯದ ಜನತೆಗೆ ಹೊಸ ಸಂದೇಶ ಕಳಿಸಬೇಕು. ಮೋದಿಯ ಡಿಜಿಟಲ್ ವ್ಯವಸ್ಥೆಯ ಬಗ್ಗೆ ಅಸಮಧಾನ ಹೊರ ಹಾಕಿದ ಅವರು ಪ್ರಧಾನಿಯವರ ಈ ಕ್ರಮ ರೈತರಿಗೆ ಗೊತ್ತಾಗುತ್ತಿಲ್ಲ.

ಮಂಡ್ಯ(ಜ.27): ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದರ ಬಗ್ಗೆ ದೇವೇಗೌಡರು ಮತ್ತೆ ಮಾತನಾಡಿದ್ದಾರೆ.ಇನ್ನೊಬ್ಬರ ಹಂಗಿನಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಾದರೆ ನನಗೆ ತುಂಬ ನೋವಾಗುತ್ತದೆ.ಆದ ಕಾರಣ ದಯಮಾಡಿ ಈ ಬಾರಿ ರಾಜಕೀಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಬೇಕು. 2017ಕ್ಕೆ ರಾಜ್ಯದಲ್ಲಿ ನಮ್ಮ ಸರ್ಕಾರ ಬರಬೇಕೆಂಬುದು ನನ್ನ ಮನದಾಸೆ ಎಂದಿದ್ದಾರೆ.

ಮಂಡ್ಯ ಜಿಲ್ಲೆ ಒಗ್ಗಟ್ಟಿನ ಮೂಲಕ ರಾಜ್ಯದ ಜನತೆಗೆ ಹೊಸ ಸಂದೇಶ ಕಳಿಸಬೇಕು. ಮೋದಿಯ ಡಿಜಿಟಲ್ ವ್ಯವಸ್ಥೆಯ ಬಗ್ಗೆ ಅಸಮಧಾನ ಹೊರ ಹಾಕಿದ ಅವರು ಪ್ರಧಾನಿಯವರ ಈ ಕ್ರಮ ರೈತರಿಗೆ ಗೊತ್ತಾಗುತ್ತಿಲ್ಲ. ರೈತರಿಗೆ ಬಲ ಕೊಡುವ ವೈಜ್ಞಾನಿಕ ನೀತಿ ಜಾರಿಗೊಳಿಸಿ ಎಂದು ಮೋದಿಯವರರಲ್ಲಿ ಮನವಿ ಮಾಡಿದರು.

ಕಾವೇರಿಯ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಿದ ಗೌಡರು, ಸುಪ್ರೀಂಕೋರ್ಟ್'ನಲ್ಲಿ ಕಾವೇರಿ ಸಮಸ್ಯೆ ಇರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅಣೆಕಟ್ಟೆಯಲ್ಲಿ ನೀರಿಲ್ಲದಿದ್ದರೂ ನೀರುಬಿಡಿ ಅನ್ನುತ್ತೆ ಸುಪ್ರೀಂ ಕೋರ್ಟ್. ಇರದ ನೀರನ್ನು ಎಲ್ಲಿಂದ ತರುವುದು ಎಂದು ಸುಪ್ರಿಂ ತೀರ್ಪಿನ ಬಗ್ಗೆ ತಮ್ಮ ನೋವನ್ನು ವ್ಯಕ್ತಪಡಿಸಿದರು.

ದೇಶದಲ್ಲಿ ಈಗ ನಡೆಯುತ್ತಿರುವ 5 ರಾಜ್ಯಗಳ ತೀರ್ಪು ಮೀಸಲಾತಿ ವಿರೋಧಿಗಳ ಪರವಾಗಿ ಬಂದರೆ ದೇಶದಲ್ಲಿ ಮೀಸಲಾತಿ ರದ್ದಾಗುವ ಸಾಧ್ಯತೆಯಿದೆ. ಒಂದು ವೇಳೆ ವಿರುದ್ಧವಾಗಿ ಬಂದರೆ ಮೀಸಲಾತಿ ಉಳಿದುಕೊಳ್ಳುತ್ತದೆ. ವಿಧಾನ ಸಭೆ ಮತ್ತು ಸಂಸತ್'ಗೆ ಒಂದೇ ಬಾರಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಬಗೆ ರಾಷ್ಟ್ರಪತಿಗಳು ಕೂಡ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿಸಿದರು.