ಕೆಲ ವರ್ಷಗಳಿಂದ ರಾಜಕೀಯ ಕಾರಣಗಳಿಗಾಗಿ ಆದಿಚುಂಚನಗಿರಿಯ ಮಠಾಧೀಶ ದಿ. ಬಾಲಗಂಗಾಧರನಾಥಸ್ವಾಮೀಜಿ ಮಧ್ಯೆ ದೇವೇಗೌಡರಿಗೆ ವೈಮನಸ್ಸು ಶುರುವಾಗಿ ಶೀತಲ ಸಮರ ಬಹಿರಂಗವಾಗಿತ್ತು. ಅಲ್ಲದೆ ಇದು ಮತ್ತೊಂದು ಒಕ್ಕಲಿಗರ ಮಹಾಸಂಸ್ಥಾನ ಹುಟ್ಟುಕೊಳ್ಳಲು ಕಾರಣವಾಗಿತ್ತು.
ಮಂಡ್ಯ(ಡಿ.30): ಕಳೆದ ಕೆಲ ವರ್ಷಗಳಿಂದ ಆದಿಚುಂಚನಗಿರಿ ಮಠದಿಂದ ದೂರವುಳಿದಿದ್ದ ಮಾಜಿ ಪ್ರಧಾನಿ ದೇವೇಗೌಡರು ಇಂದು ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಪೀಠಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದು ಮಠದ ದೇಗುಲದ ದರ್ಶನ ಪಡೆದಿದ್ದಾರೆ.
ಕೆಲ ವರ್ಷಗಳಿಂದ ರಾಜಕೀಯ ಕಾರಣಗಳಿಗಾಗಿ ಆದಿಚುಂಚನಗಿರಿಯ ಅಂದಿನ ಮಠಾಧೀಶರಾದ ದಿ. ಬಾಲಗಂಗಾಧರನಾಥಸ್ವಾಮೀಜಿ ಮಧ್ಯೆ ದೇವೇಗೌಡರಿಗೆ ವೈಮನಸ್ಸು ಶುರುವಾಗಿ ಶೀತಲ ಸಮರ ಬಹಿರಂಗವಾಗಿತ್ತು. ಅಲ್ಲದೆ ಇದು ಮತ್ತೊಂದು ಒಕ್ಕಲಿಗರ ಮಹಾಸಂಸ್ಥಾನ ಹುಟ್ಟುಕೊಳ್ಳಲು ಕಾರಣವಾಗಿತ್ತು. ಗೌಡರ ಕುಟುಂಬ ಶ್ರೀಮಠಕ್ಕೆ ಭೇಟಿ ಕೊಟ್ಟರೂ ದೇವೇಗೌಡರು ಮಾತ್ರ ದೂರ ಉಳಿದಿದ್ದರು. ಅನಂತರ ಕೆಲ ವರ್ಷಗಳ ಬಳಿಕ ಸಂಬಂಧ ತಿಳಿಯಾಗಿ ಶ್ರೀಗಳ ಬಗ್ಗೆ ಸಕಾರಾತ್ಮಕ ಧೋರಣೆ ತಾಳಿದ್ದರು. 2013ರಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಅಂತ್ಯಸಂಸ್ಕಾರದಲ್ಲಿ ದೇವೇಗೌಡರು ತಾವೆ ಮುಂದು ನಿಂತು ಅಂತ್ಯಸಂಸ್ಕಾರ ವಿಧಿವಿಧಾನದ ಪ್ರಮುಖ ಕಾರ್ಯಗಳ ನೇತೃತ್ವ ವಹಿಸಿದ್ದರು.
ಗೌಡರು ಅದಿಚುಂಚನಗಿರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು 1973ರಲ್ಲಿ, ಕೆಲವು ವಿಶೇಷ ಸಂದರ್ಭ ಹೊರತುಪಡಿಸಿದರೆ ಮಠದೊಂದಿಗೆ ದೇವೇಗೌಡ ಅಂತರ ಕಾಯ್ದುಕೊಂಡು 44 ವರ್ಷ ಕಳೆದಿದೆ.
ದೇವೇಗೌಡರ ಭೇಟಿಯ ಬಗ್ಗೆ ವಿಶೇಷ ಅರ್ಥ ಕಲ್ಪಿಸದ ನಿರ್ಮಲಾನಂದ ಸ್ವಾಮಿಗಳು ' ದೇವೇಗೌಡರು ಮಠಕ್ಕೆ ಭೇಟಿ ನೀಡಿದ್ದರಲ್ಲಿ ಯಾವುದೇ ವಿಶೇಷವಿಲ್ಲ. ಅವರು ಕೂಡ ಶ್ರೀಮಠದ ಭಕ್ತರೇ ಆಗಿದ್ದು ಅಮವಾಸೆ ಪೂಜೆಗೆ ಬರಬೇಕಂದುಕೊಂಡಿದ್ದ ಅವರಿಗೆ ಇದುವರೆಗೂ ಕಾಲ ಕೂಡಿ ಬಂದಿರಲಿಲ್ಲ. ಇಂದು ಕಾಲ ಕೂಡಿ ಬಂದಿದ್ದರಿದ ಶ್ರೀಮಠಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಗೌಡರಿಗೆ ಮಠದೊಂದಿಗಿನ ವೈಮನಸ್ಸು ಸಂಪೂರ್ಣ ದೂರವಾಗಿದ
