ನವದೆಹಲಿ(ಸೆ.9): ತಮಿಳುವಾಡು ಮುಖ್ಯಮಂತ್ರಿ ಜಯಲಲಿತಾ ಹಠಮಾರಿ ಮಹಿಳೆ. ಪಕ್ಕದ ರಾಜ್ಯದ ವಾಸ್ತವ ಸ್ಥತಿಯ ಬಗ್ಗೆ ಅವರು ಅರಿತುಕೊಳ್ಳುತ್ತಿಲ್ಲ. ನೀರು ಇದೆಯೋ, ಇಲ್ಲವೋ ಎಂಬುದನ್ನೇ ತಿಳಿದುಕೊಳ್ಳುತ್ತಿಲ್ಲ. ನಾನು 50 ವರ್ಷ ರಾಜಕೀಯ ಹೋರಾಟ ಮಾಡಿದ್ದೇನೆ. 2 ಬಾರಿ ರಾಜೀನಾಮೆ ನೀಡಿದ್ದೇನೆ. ಇಂತಹ ಮನಸ್ಥಿತಿಯಿರುವ ಮಹಿಳೆಯನ್ನು ಇಲ್ಲಿಯವರೆಗೂ ನಾನು ನೋಡಿಲ್ಲ. ಇದಕ್ಕೆಲ್ಲ ಸುಪ್ರೀಂಕೋರ್ಟ್​ನಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ನಾರಿಮನ್ ಭೇಟಿ ಬಳಿಕ ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.