ಕಾಂಗ್ರೆಸ್ಸಿನ ಪುಟ್ಟಸ್ವಾಮಿಗೌಡರು ಜಯಭೇರಿ ಬಾರಿಸಿದ್ದರು. ಈ ಸೋಲಿನ ಬಳಿಕ ಪುಟಿದೆದ್ದ ದೇವೇಗೌಡ, 1994ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾದರು

ಕನಕಪುರದಲ್ಲಿ ಗೌಡರನ್ನು 3ನೇ ಸ್ಥಾನಕ್ಕೆ ಮಣಿಸಿದ್ದವರು ಈಗ ಜೆಡಿಎಸ್'ನ ಮೊದಲ ಸಾಲಿನ ನಾಯಕರು ರಾಜಕಾರಣದಲ್ಲಿ ಏಳು-ಬೀಳು ಸಾಮಾನ್ಯ. ಈ ಮಾತಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗಿಂತ ಉದಾಹರಣೆ ಬೇಕಿಲ್ಲ. 1989ರ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಹಾಗೂ ಹೊಳೆನರಸೀಪುರ ಎರಡೂ ಕ್ಷೇತ್ರಗಳಲ್ಲೂ ದೇವೇಗೌಡ ಸ್ಪರ್ಧೆ ಮಾಡಿದ್ದರು.

ಕನಕಪುರದಲ್ಲಿ ಪಿಜಿಆರ್ ಸಿಂಧ್ಯ ಎದುರು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಹೊಳೆನರಸೀಪುರದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಕಾಂಗ್ರೆಸ್ಸಿನ ಪುಟ್ಟಸ್ವಾಮಿಗೌಡರು ಜಯಭೇರಿ ಬಾರಿಸಿದ್ದರು. ಈ ಸೋಲಿನ ಬಳಿಕ ಪುಟಿದೆದ್ದ ದೇವೇಗೌಡ, 1994ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾದರು. 1996ರಲ್ಲಿ ಪ್ರಧಾನಿ ಹುದ್ದೆಗೂ ಏರಿದರು.