ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಕೆಂಪೇಗೌಡರೇ ಸ್ಫೂರ್ತಿ.ಸರ್ವ ಧರ್ಮ ಸಮಭಾವದ ಮಾರ್ಗದರ್ಶಿ ಸೂತ್ರ ಕೊಟ್ಟಿದ್ದವರು ಅವರೆ. ಪ್ರಜಾತಂತ್ರ ಸೂತ್ರವನ್ನು 12ನೇ ಶತಮಾನದಲ್ಲಿ ಬಸವಣ್ಣ ನೀಡಿದರೆ ಆಡಳಿತ ಸೂತ್ರವನ್ನು 15ನೇ ಶತಮಾನದಲ್ಲಿ ಕೆಂಪೇಗೌಡರು ಕೊಟ್ಟಿದ್ದಾರೆ' ಎಂದು ಹೇಳಿದರು.

ಬೆಂಗಳೂರು(ಜೂ.27): ರಾಜ್ಯ ರಾಜಕೀಯ ವಿರೋಧಿಗಳೆಂದೆ ಹೆಸರಾದ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಒಂದೇ ವೇದಿಕೆಯಲ್ಲಿ ಒಂದಾಗಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್'ನಲ್ಲಿ ಹಮ್ಮಿಕೊಂಡ ಕೆಂಪೇಗೌಡರ ಜಯಂತಿಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ವೇದಿಕೆಯಲ್ಲಿ ಆಸೀನರಾಗಿದ್ದ ಎಲ್ಲ ಗಣ್ಯರ ಕಾಲಿಗೆ ನಮಸ್ಕರಿಸಿದ ಜೊತೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಾಲಿಗೂ ನಮಸ್ಕರಿಸಿದರು. ಗೌಡರು ಸಹ ಆಶೀರ್ವದಿಸಿ ನಕ್ಕು ಹಸ್ತಲಾಘವ ಮಾಡಿದರು. ಈ ಸೂಚನೆ ಮುಂದಿನ ದಿನಗಳಲ್ಲಿ ಇಬ್ಬರು ನಾಯಕರು ವೈರತ್ವ ಮರೆಯುವಂತೆ ಕಾಣುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಕೆಂಪೇಗೌಡರೇ ಸ್ಫೂರ್ತಿ.ಸರ್ವ ಧರ್ಮ ಸಮಭಾವದ ಮಾರ್ಗದರ್ಶಿ ಸೂತ್ರ ಕೊಟ್ಟಿದ್ದವರು ಅವರೆ. ಪ್ರಜಾತಂತ್ರ ಸೂತ್ರವನ್ನು 12ನೇ ಶತಮಾನದಲ್ಲಿ ಬಸವಣ್ಣ ನೀಡಿದರೆ ಆಡಳಿತ ಸೂತ್ರವನ್ನು 15ನೇ ಶತಮಾನದಲ್ಲಿ ಕೆಂಪೇಗೌಡರು ಕೊಟ್ಟಿದ್ದಾರೆ' ಎಂದು ಹೇಳಿದರು.

ಸಿಎಂ - ಗೌಡ ಮುಖಾಮುಖಿ

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ಹೆಚ್'ಡಿ. ದೇವೇಗೌಡ ಮತ್ತೊಮ್ಮೆ ಮುಖಾಮುಖಿಯಾದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಗೌಡರು ಸ್ವತಃ ಎದ್ದುನಿಂತು ಹಸ್ತಲಾಘವ ನೀಡಿ ಬರಮಾಡಿಕೊಂಡರು.