ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದ್ದು, ಇದರಿಂದ ರಾಜ್ಯದ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಅಲ್ಲದೇ ಮೋಡ ಬಿತ್ತನೆ ಬಗ್ಗೆಯೂ ಕೂಡ ಸಚಿವ ಸಂಪುಟದಲ್ಲಿ ಮಾತುಕತೆ ನಡೆಸಲಾಗುತ್ತಿದೆ ಎಂದು ಸಚಿವ ಎಚ್.ಡಿ ರೇವಣ್ಣ ಹೇಳಿದರು. 

ಇನ್ನು ಇದೇ ವೇಳೆ ರಾಜ್ಯದಲ್ಲಿ ಮತ್ತೊಂದು ಚುನಾವಣೆಗೆ ಸಿದ್ಧವಾಗಿ ಎಂದು ಹೇಳಿರುವ  ಹೇಳಿಕೆಯ ಬಗ್ಗೆ ರೇವಣ್ಣ ಪ್ರತಿಕ್ರಿಯಿಸಿದ್ದು, ನಮ್ಮ ಸರ್ಕಾರಕ್ಕೆ ಯಾವುದೇ ರೀತಿ ಸಮಸ್ಯೆ ಇಲ್ಲ. ಸರ್ಕಾರ ಸುಭದ್ರವಾಗಿಯೇ ಇರಲಿದೆ ಎಂದು ಹೇಳಿದರು. 

ಅಲ್ಲದೇ ನಿಖಿಲ್ ಇಂತಹ ಹೇಳಿಕೆಯನ್ನು ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ನೀಡಿರಬಹುದು. ಈ ನಿಟ್ಟಿನಲ್ಲಿ ಯಾವಾಗಲಾದರೂ ಚುನಾವಣೆ ಎದುರಾಗಬಹುದು ಎಂದು ನಿಖಿಲ್ ಹೇಳಿರಬಹುದು. ಅದರ ಹೊರತು ಇನ್ನೇನು ಇಲ್ಲವೆಂದು ರೇವಣ್ಣ ಸಮರ್ಥನೆ ನೀಡಿದರು. 

"