ಮತ್ತೆ ಯಡಿಯೂರಪ್ಪ ಪರ್ಸನಲ್ ಲೈಫ್ ಕೆದಕಿದ HDK
ಸಿಎಂ ಯಡಿಯೂರಪ್ಪ ಖಾಸಗಿ ಜೀವನದ ಬಗ್ಗೆ ಮತ್ತೊಮ್ಮೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದಾರೆ.
ರಾಮನಗರ (ಸೆ.20) : ಮತ್ತೊಮ್ಮೆ ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ.
ರಾಮನಗರದ ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ ಸಿಎಂ ಯಡಿಯೂರಪ್ಪ ಪತ್ನಿ ಸಾವು ಸಹಜವಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಅನುಮಾನಾಸ್ಪದವಾಗಿ ಸಿಎಂ ಪತ್ನಿ ಸಾವಾಗಿತ್ತು. ಒಂದು ಅಡಿ ಇರುವ ನೀರಿನ ಸಂಪಿಗೆ ಬಿದ್ದು ಸಾವನ್ನಪ್ಪಿದ್ದು, ಇದು ಅನುಮಾನಾಸ್ಪದ ಸಾವಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನನಗೆ ಬಿಡದಿಯಲ್ಲಿ ಕೃಷಿ ಭೂಮಿ ಇದೆ. ನನಗೆ ರಾಜಕೀಯ ಅವಶ್ಯಕತೆ ಇಲ್ಲ. ಜನರಿಗಾಗಿ ಇನ್ನೂ ನಾನು ರಾಜಕೀಯದಲ್ಲಿ ಇದ್ದೇನೆ ಎಂದು ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ರಾಜಕೀಯದಿಂದ ಬೇಸತ್ತು ಹೋಗಿದ್ದೇನೆ. ನಾನು ಯಾವುದೇ ಒಂದು ಅಕ್ರಮ ಮಾಡಿಲ್ಲ. ನನ್ನ ಬಳಿ ಯಾವ ಸಿಬಿಐ, ಐಟಿ, ಇಡಿಯವರು ಬೇಕಾದರೂ ಬರಲಿ ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದರು.