ಕೇಂದ್ರ ಸರ್ಕಾರದ ವಿರುದ್ಧ ಗೌಡರು ಗರಂ

First Published 25, Jun 2018, 9:32 AM IST
HD Devegowda Slams Union Govt
Highlights

ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಜೆಡಿಎಸ್ ಮುಖಂಡ ಎಚ್ ಡಿ ದೇವೇಗೌಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪ್ರತಿನಿಧಿಗಳಲ್ಲದೆ ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಇದನ್ನು ಪ್ರತಿಭಟಿಸಿ ಶರತ್ತು ಪತ್ರದ ಜೊತೆಗೆ ರಾಜ್ಯದ ಇಬ್ಬರು ಪ್ರತಿನಿಧಿಗಳನ್ನು ಶೀಘ್ರವೇ ಕಳಿಸಲಾಗುವುದು ಎಂದಿದ್ದಾರೆ.

ಬೆಂಗಳೂರು :  ಕರ್ನಾಟಕದ ಪ್ರತಿನಿಧಿಗಳಲ್ಲದೆ ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಇದನ್ನು ಪ್ರತಿಭಟಿಸಿ ಶರತ್ತು ಪತ್ರದ ಜೊತೆಗೆ ರಾಜ್ಯದ ಇಬ್ಬರು ಪ್ರತಿನಿಧಿಗಳನ್ನು ಶೀಘ್ರವೇ ಕಳಿಸಲಾಗುವುದು ಎಂದಿದ್ದಾರೆ.

ಶ್ರವಣಬೆಳಗೊಳದಲ್ಲಿ ಭಾನು ವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ನಿರ್ಬಂಧಗಳಿಗೆ ನನ್ನ ವಿರೋಧ ವಿದ್ದು, ಸಂಬಂಧಪಟ್ಟವರಿಗೆ ಈಗಾಗಲೇ ಮನವರಿಕೆ ಮಾಡಿದ್ದೇನೆ ಎಂದು ಹೇಳಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ನಂತರ ಪ್ರತಿ 10 ದಿನಕ್ಕೊಮ್ಮೆ ನೀರು ಅಳತೆ ಮಾಡು ತ್ತಾರೆ. 

ಬೆಳೆ ಮತ್ತು ಇತರೆ ಬಳಕೆ ನೀರನ್ನೂ ಅಳತೆ ಮಾಡಲಾಗುತ್ತದೆ. ಇದಕ್ಕೆ ನಮ್ಮ ವಿರೋಧವಿದ್ದು ಮುಖ್ಯಮಂತ್ರಿ ಮೂಲಕ ಪ್ರಧಾನಿ ಮೋದಿ ಅವರಿಗೂ ರಾಜ್ಯದ ನಿರ್ಧಾರವನ್ನು ಮನವರಿಕೆ ಮಾಡಲಾಗಿದೆ. ಶೀಘ್ರವೇ  ನಮ್ಮ ನಿಲುವಿನ ಬಗ್ಗೆ ಶರತ್ತು ಪತ್ರ ಸಿದ್ಧಪಡಿಸಿ ಅದರೊಂದಿಗೆ ಇಬ್ಬರು ಪ್ರತಿನಿಧಿಗಳನ್ನು ಕಳಿಸಿಕೊಡಲಾಗುವುದು ಎಂದರು. ಒಪ್ಪಂದದ ಪ್ರಕಾರ ತಮಿಳುನಾಡಿಗೆ ೧೭೦ ಟಿಎಂಸಿ ನೀರು ಹರಿಸಬೇಕು. ಆದರೆ ಮಳೆಗಾಲದಲ್ಲಿ ಹರಿಯುವ ಹೆಚ್ಚುವರಿ ನೀರನ್ನು ಯಾರೂ ಹಿಡಿಯಲಾಗುವುದಿಲ್ಲ. ಈ ಎಲ್ಲಾ ಅಂಶಗಳು ಷರತ್ತು ಪತ್ರದಲ್ಲಿ ಇರಲಿವೆ ಎಂದು ಹೇಳಿದರು.

loader