ಕೆಸಿಆರ್‌​ - ದೇವೇಗೌಡ ಭೇಟಿ : ಮಹತ್ವದ ತೀರ್ಮಾನ ?

HD Devegowda Meet KCR
Highlights

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಭಾನುವಾರ ಹೈದರಾಬಾದ್‌ನಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರನ್ನು ಭೇಟಿಯಾಗಿದ್ದಾರೆ.

ಹೈದರಾಬಾದ್‌: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಭಾನುವಾರ ಹೈದರಾಬಾದ್‌ನಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರನ್ನು ಭೇಟಿಯಾಗಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೈದರಾಬಾದ್‌ಗೆ ತೆರಳಿದ್ದ ದೇವೇಗೌಡರು, ಟಿಆರ್‌ಎಸ್‌ ಮುಖ್ಯಸ್ಥರೂ ಆದ ಚಂದ್ರಶೇಖರ್‌ ರಾವ್‌ ಅವರನ್ನು ಅವರ ಬೇಗಂಪೇಟೆ ಕಚೇರಿಯಲ್ಲಿ ಭೇಟಿಯಾದರು.

ಇದೊಂದು ಸೌಜನ್ಯದ ಭೇಟಿ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. ಆದರೆ, ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಮತ್ತು ಫೆಡರಲ್‌ ಫ್ರಂಟ್‌ ರಚನೆ ಕುರಿತಂತೆ ಇಬ್ಬರೂ ನಾಯಕರ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚನೆ ಬಗ್ಗೆ ಮಾತುಕತೆಗಾಗಿ ಕೆಸಿಆರ್‌ ಏಪ್ರಿಲ್‌ನಲ್ಲಿ ದೇವೇಗೌಡರನ್ನು ಭೇಟಿಯಾಗಿದ್ದರು. ದೇಶದ ರಾಜಕೀಯದಲ್ಲಿ ಗುಣಮಟ್ಟದ ಬದಲಾವಣೆ ತರುವ ಉದ್ದೇಶದಿಂದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ರಾಷ್ಟ್ರೀಯ ಮಟ್ಟದ ಫೆಡರಲ್‌ ಫ್ರಂಟ್‌ ರಚನೆಯ ಚಿಂತನೆಯನ್ನು ಈಗಾಗಲೇ ಕೆಸಿಆರ್‌ ಹೊರಹಾಕಿದ್ದಾರೆ.

loader